ನಾಮನಿರ್ದೇಶಿತ ಸದಸ್ಯರ ನಿರ್ಲಕ್ಷ್ಯ

gan (3)
Published on

ಕುಂದಾಪುರ: ಕೋಡಿಯಲ್ಲಿ ಹೈ ವಾಸ್ಟ್ ದೀಪ, ಮೆಸ್ಕಾಂ ಕಾಮಗಾರಿಯಿಂದ ಜನರಿಗೆ ಸಮಸ್ಯೆ, ಸಿಗದ ಪರಿಹಾರ ಬಗ್ಗೆ ಸದಸ್ಯರಾದ ಕಮಲಾ ಮಂಜುನಾಥ್, ಶ್ವೇತಾ ಸಂತೋಷ್ ಹಾಗೂ ನಿತ್ಯಾನಂದ ಕೆ.ಜಿ. ಗಮನ ಸೆಳೆದರು. ಕುಂದಾಪುರ ಪುರಸಭೆ ಸಾವಾನ್ಯ ಸಭೆ ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆಯಿತು. ಸಭೆ ಆರಂಭವಾಗುತ್ತಿದ್ದಂತೆಯೇ ನಾಮನಿರ್ದೇಶಿತ ಸದಸ್ಯರಾದ ಶಶಿಧರ, ಅಶೋಕ್ ಸುವರ್ಣ, ಸದಾನಂದ ಖಾರ್ವಿ, ಶಶಿರಾಜ್ ಪುರಸಭೆಯಲ್ಲಿ ನಾಮನಿರ್ದೇಶಿತರನ್ನು ನಿರ್ಲಕ್ಷ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಇದಕ್ಕೆ ಉತ್ತರಿಸಿದ ಅಧ್ಯಕ್ಷ ಮೋಹನದಾಸ ಶೆಣೈ, ನಾಮನಿರ್ದೇಶಿತ ಸದಸ್ಯರು ನೀಡಿದ 2 ಕಾಮಗಾರಿ ಸೇರಿಸಲಾಗಿದೆ. ಯಾರನ್ನೂ ನಿರ್ಲಕ್ಷ್ಯ ವಾಡುವುದಿಲ್ಲ ಎಂದರು. ನಾಮನಿರ್ದೇಶಿತ ಸದಸ್ಯರಿಗೆ ಪ್ರತ್ಯೇಕ ಅನುದಾನ ಇಲ್ಲ. ಸಭೆಯಲ್ಲಿ ಸಲಹೆಗಳನ್ನು ನೀಡಬಹುದು. ಸ್ವೀಕರಿಸುವುದು, ಬಿಡುವುದು ಇತರ ಸದಸ್ಯರಿಗೆ ಸೇರಿದ್ದು ಎಂದು ಮುಖ್ಯಾಧಿಕಾರಿ ಆನಂದ್ ಜೆ. ಹೇಳಿದರು. ಲೋಕೋಪಯೋಗಿ ಇಲಾಖೆ ಮನವಿಯಂತೆ ರಿಂಗ್ ರೋಡ್‌ಗೆ 2021ರಲ್ಲಿಯೇ ಮೆಸ್ಕಾಂ ಪ್ರಸ್ತಾವನೆ ನೀಡಿತ್ತು. 4 ವರ್ಷ ಕಾಮಗಾರಿ ವಾಡದೆ ಈಗ ಖುಷಿ ಬಂದಂತೆ ನಡೆಸಲಾಗಿದೆ. ಇದಕ್ಕೆ ಮೆಸ್ಕಾಂ ಒಪ್ಪುವುದಿಲ್ಲ. ಶಾಸಕರು ಕೂಡಾ ಭೇಟಿ ನೀಡಿ ಲೋಕೋಪಯೋಗಿ ಇಲಾಖೆ ಗುತ್ತಿಗೆದಾರರ ತಪ್ಪನ್ನು ಗಮನಿಸಿದ್ದಾರೆ. ಸರಿಪಡಿಸಿಯೇ ಕಾಮಗಾರಿ ನಡೆಸಬೇಕು ಎಂದು ಮೆಸ್ಕಾಂ ಎಇ ರಾವೇಂದ್ರ ಹೇಳಿದರು. ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರೇವಾನಂದ ಕೆ. ವಾಹಿತಿ ನೀಡಿದರು. ಉಪಾಧ್ಯಕ್ಷೆ ವನಿತಾ ಬಿಲ್ಲವ, ಸ್ಥಾಯಿ ಸಮಿತಿ ಅಧ್ಯಕ್ಷ ಪ್ರಭಾಕರ ವಿ. ಉಪಸ್ಥಿತರಿದ್ದರು.

ಅಭಿವೃದ್ಧಿ ಕೆಲಸಗಳು ಆಗಿಲ್ಲ

ಪುರಸಭೆ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕೆಲಸಗಳು ಆಗಿಲ್ಲ ಎಂದು ವಾಜಿ ಅಧ್ಯಕ್ಷೆ ವೀಣಾ ಭಾಸ್ಕರ ಮೆಂಡನ್ ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು. ಅಧ್ಯಕ್ಷ ಮೋಹನದಾಸ ಶೆಣೈ ಮಾತನಾಡಿ, ಅಭಿವೃದ್ಧಿ ಕಾರ್ಯಗಳು ಆಗುತ್ತಿವೆ. ಯಾವುದೂ ಬಾಕಿಯಾಗಿಲ್ಲ. ಹೆಚ್ಚು ಅನುದಾನ ಬಾರದ ಕಾರಣ ಸೀಮಿತ ಅನುದಾನದಲ್ಲಿಯೇ ಕಾಮಗಾರಿಗಳನ್ನು ನಡೆಸಬೇಕಾಗಿದೆ ಎಂದರು. ಮುಖ್ಯಾಧಿಕಾರಿಯ ಅನಾರೋಗ್ಯದಿಂದಾಗಿ ಕೆಲವು ಸಾವಾನ್ಯ ಸಭೆ, ವಿಶೇಷ ಸಭೆ ನಡೆಸಿಲ್ಲ ಎಂದರು. ಮೊದಲ ಸಭೆಯಲ್ಲಿ 106, ನಂತರದ ಸಭೆಗಳಲ್ಲಿ 60 ರಿಂದ 70 ವಿಷಯ ಚರ್ಚೆ ವಾಡಿ ನಿರ್ಣಯ ವಾಡಲಾಗಿದೆ. ಯಾವುದೇ ಲೋಪ ಆಗಿಲ್ಲ ಎಂದು ಮುಖ್ಯಾಧಿಕಾರಿ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net