ನೀರಗಂಟಿಗಳ 1ತಿಂಗಳ ವೇತನ ಬಾಕಿ

Published on

ಬಾಗೇಪಲ್ಲಿ, ಚೇಳೂರು ತಾಲೂಕಿನ 105 ಜನರಿಗೆ ಪಾವತಿಯಾಗಿಲ್ಲ

ಪಿ.ಮಂಜುನಾಥರೆಡ್ಡಿ ಬಾಗೇಪಲ್ಲಿ

ಚಾಮರಾಜನಗರ ಜಿಲ್ಲೆಯ ಹೊಂಗನೂರು ಗ್ರಾಪಂ ನೀರಗಂಟಿ ಬಾಕಿ ಸಂಬಳ ಪಾವತಿಯಾಗದ ಕಾರಣಕ್ಕೆ ಮನನೊಂದು ಗ್ರಾಪಂ ಕಚೇರಿ ಎದುರೇ ಆತ್ಯಹತ್ಯೆ ಮಾಡಿಕೊಂಡಿರುವ ಟನೆಯು ಸುದ್ದಿಯಲ್ಲಿರುವಾಗಲೇ ಬಾಗೇಪಲ್ಲಿ ಮತ್ತು ಚೇಳೂರು ತಾಲೂಕಿನ

105 ನೀರಗಂಟಿಗಳಿಗೆ ಸೆಪ್ಟೆಂಬರ್​ ತಿಂಗಳ ಬಾಕಿ

ಸಂಬಳ ಪಾವತಿಯಾಗಿಲ್ಲ ಎನ್ನುವುದು ಬೆಳಕಿಗೆ ಬಂದಿದೆ.

ಸರಣಿ ಹಬ್ಬಗಳ ಆಚರಣೆ ಸಮಯದಲ್ಲೇ ನೀರಗಂಟಿಗಳಿಗೆ ಸಂಬಳ ನೀಡದ ಗ್ರಾಪಂಗಳ ಆಡಳಿತ ಕಾರ್ಯವೈಖರಿಗೆ ನೀರಗಂಟಿ ಕುಂಟುಂಬಗಳು ಶಾಪ ಹಾಕುತ್ತಿದ್ದು, ಇನ್ನಾದರೂ ಅಧಿಕಾರಿಗಳು ಎಚ್ಚೆತ್ತು ಸಕಾಲಕ್ಕೆ ನೀರಗಂಟಿಗಳ

ಸಂಬಳದ ಬ್ಯಾಂಕ್​ ಖಾತೆಗೆ ಜಮೆ ಮಾಡಿಸಿ.

ಬಾಗೇಪಲ್ಲಿ ತಾಲೂಕು ವ್ಯಾಪ್ತಿಯಲ್ಲಿ ಬಿಳ್ಳೂರು, ದೇವರಗುಡಿಪಲ್ಲಿ, ಂಟಂವಾರಪಲ್ಲಿ, ಗೊರ್ತಪಲ್ಲಿ, ಗೂಳೂರು, ಜೂಲಪಾಳ್ಯ, ಕಾನಗಮಾಕಲಪಲ್ಲಿ, ಕೊತ್ತಕೋಟೆ, ಮಾರಗಾನುಕುಂಟೆ, ಮಿಟ್ಟೇಮರಿ, ನಲ್ಲಪರೆಡ್ಡಿಪಲ್ಲಿ, ಪರಗೋಡು, ಪಾತಪಾಳ್ಯ, ತಿಮ್ಮಂಪಲ್ಲಿ, ತೊಳ್ಳಪಲ್ಲಿ, ಯಲ್ಲಂಪಲ್ಲಿ ಸೇರಿ ಒಟ್ಟು 16 ಗ್ರಾಮ ಪಂಚಾಯಿತಿಗಳಿದ್ದು, ಒಟ್ಟು 263 ನೀರಗಂಟಿಗಳು ಕರ್ತವ್ಯದಲ್ಲಿದ್ದಾರೆ. ಕಾನಗಮಾಕಲಪಲ್ಲಿ 24 ಜನ, ಯಲ್ಲಂಪಲ್ಲಿ 22, ತಿಮ್ಮಂಪಲ್ಲಿ25, ಂಟಂವಾರಪಲ್ಲಿ 22 ಜನ ಸೇರಿ ನಾಲ್ಕು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ 93 ನೀರಗಂಟಿಗಳಿಗೆ ಸೆಪ್ಟೆಂಬರ್​ ತಿಂಗಳ ವೇತನ ಜಮೆ ಆಗಿರುವುದಿಲ್ಲ.ಚೇಳೂರು ತಾಲೂಕು ವ್ಯಾಪ್ತಿಯಲ್ಲಿ ಬುರಡಗುಂಟೆ, ಚಾಕವೇಲು, ಚೇಳೂರು, ಚಿಲಕಲನೇರ್ಪು, ಏನಿಗದಲೆ, ನಲ್ಲಗುಟ್ಲಪಲ್ಲಿ, ಪಾಳ್ಯಕೆರೆ, ಪೋಲನಾಯಕನಪಲ್ಲಿ, ಪುಲಿಗಲ್​, ರಾಶ್ಚೇರುವು, ಸೋಮನಾಥಪುರ ಸೇರಿ ಒಟ್ಟು 12 ಗ್ರಾಮ ಪಂಚಾಯಿತಿಗಳಿದ್ದು, 12 ಗ್ರಾಮಗಳಲ್ಲಿ ಒಟ್ಟು 138 ನೀರಗಂಟಿಗಳು ಕರ್ತವ್ಯದಲ್ಲಿದ್ದು, ಏನಿಗದಲೆ ಗ್ರಾಮ ಪಂಚಾಯಿತಿಯ 12 ನೀರಗಂಟಿಗಳಿಗೆ ಸೆಪ್ಟೆಂಬರ್​ ತಿಂಗಳ ಸಂಬಳ ಆಗಿಲ್ಲ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net