ಶತಮಾನದ ಶಾಲೆಗಳಿಗೆ ಬೇಕಿದೆ ಅಭಿವೃದ್ಧಿ ಸ್ಪರ್ಶ

web 2
Published on

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕಾಯಕಲ್ಪ ಶುರು ಮಾದರಿ ಶಾಲೆಗೆ ಸಾರ್ವಜನಿಕರ ಒತ್ತಾಯ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಶತಮಾನಕ್ಕೂ ಹೆಚ್ಚು ಇತಿಹಾಸ ಹೊಂದಿರುವ 59 ಸರ್ಕಾರಿ ಶಾಲೆಗಳು ಇದ್ದು, ಮತ್ತಷ್ಟು ಅಭಿವೃದ್ಧಿಯ ನಿರೀಕ್ಷೆಯಲ್ಲಿವೆ.

ಈಗಾಗಲೇ ಹಂತ ಹಂತವಾಗಿ ಮೂಲಸೌಕರ್ಯಗಳನ್ನು ಒದಗಿಸಿ, ಉತ್ತಮ ಕಲಿಕಾ ವಾತಾವರಣ ನಿರ್ಮಿಸುವ ಕೆಲಸವಾಗುತ್ತಿದೆ. ಆದರೆ, ನಿರೀಕ್ಷೆಗೆ ಅನುಗುಣವಾಗಿ ಇಲ್ಲ. ಇದರ ನಡುವೆ ಕನ್ನಡ ಅಭಿವೃದ್ಧಿ ಪ್ರಾಧಿಕಾರವು ಸರ್ಕಾರಿ ಶಾಲೆಗಳ ಮಾಹಿತಿ ಪಡೆದುಕೊಂಡು ಪ್ರಗತಿದಾಯಕ ಯೋಜನೆ ರೂಪಿಸಲು ಮುಂದಾಗಿರುವುದು ಶಿಕ್ಷಣ ವಲಯದಲ್ಲಿ ಸಂತಸ ಮೂಡಿಸಿದೆ. ಈಗಾಗಲೇ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿರುವ 100 ವರ್ಷ ಪೂರ್ಣಗೊಳಿಸಿರುವ ಶಾಲೆಗಳ ಪಟ್ಟಿಯನ್ನು ಪಡೆದುಕೊಂಡಿರುವ ಪ್ರಾಧಿಕಾರವು, ಶಾಲೆಗಳಿಗೆ ಹೊಸ ಕಾಯಕಲ್ಪ ನೀಡಬೇಕೆಂಬ ಒತ್ತಾಯ ಕೇಳಿದೆ.

ಶತಮಾನದ ಶಾಲೆಗಳು

ಬಾಗೇಪಲ್ಲಿಯ ಸರ್ಕಾರಿ ಮಾದರಿ ಹಿರಿಯ ಉರ್ದು ಶಾಲೆ, ಸರ್ಕಾರಿ ಮಾದರಿ ಬಾಲಕರ ಹಿರಿಯ ಮತ್ತು ಕಿರಿಯ ಶಾಲೆ, ಮಾರ್ಗಾನುಕುಂಟೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಾತಪಾಳ್ಯ, ಪರಗೋಡು, ಆಚೆಪಲ್ಲಿ, ಚಾಕವೇಲು ಮತ್ತು ಗೂಳೂರು ಶಾಲೆ, ಚಿಕ್ಕಬಳ್ಳಾಪುರ ನಗರದ ಜಿಜೆಸಿ ಶಾಲೆ, ಕರ್ನಾಟಕ ಎಂಎಚ್‌ಪಿಎಸ್ ಶಾಲೆ, ತಾಲ್ಲೂಕಿನ ದಿಬ್ಬೂರಿನ ಜಿಎಚ್‌ಪಿಎಸ್, ಅಂದಾರ್ಲಹಳ್ಳಿ, ಮಂಡಿಕಲ್ಲು, ಪೆರೇಸಂದ್ರ, ಮಂಚನಬಲೆಯ ಜಿಎಚ್‌ಪಿಎಸ್ ಮತ್ತು ಉರ್ದು ಶಾಲೆ, ಕಂದವಾರ ಶಾಲೆ, ಚಿಂತಾಮಣಿ ನಗರದ ನೆಕ್ಕುಂದಿಪೇಟೆ, ದೊಡ್ಡಪೇಟೆ, ಜಿಎಚ್‌ಪಿಎಸ್ ಬಾಲಕರ ಶಾಲೆಗಳು, ಸೊಣಶೆಟ್ಟಿಹಳ್ಳಿ, ಸಂತೇಕಲ್ಲಹಳ್ಳಿ, ಕೋಟಗಲ್ಲು, ಕೋನಪಲ್ಲಿ, ಇರೇಗಟ್ಟಿನೇಗನಹಳ್ಳಿ, ಹಾಡಿಗೆರೆ, ಚಿಲಕಲನೇರ್ಪು ಶಾಲೆ, ಗೌರಿಬಿದನೂರು ಭಾಗದ ಕೋಟೆ ಶಾಲೆ, ಮರಳೂರು, ರಾಂಪುರ, ಸೊಣಗಾನಹಳ್ಳಿ, ತರಿದಾಳು, ಮಾವಿನಕಾಯನಹಳ್ಳಿ, ತೊಂಡೇಬಾವಿ, ಬೊಮ್ಮಶೆಟ್ಟಿಹಳ್ಳಿ, ಬಿ.ಬೊಮ್ಮಸಂದ್ರ, ಸರ್ಕಾರಿ ಉರ್ದು ಬಾಲಕರ ಹಿರಿಯ, ಕಿರಿಯ ಶಾಲೆ ಅಲೀಪುರ, ಜಿಎಚ್‌ಪಿಎಸ್ ಅಲಿಪುರ, ಹಿರೇಬಿದನೂರು, ಹೊಸೂರು, ಇಡಗೂರು, ಕಲ್ಲೂಡಿ, ಕೆಂಕೆರೆ, ಹೊಸಕುರುಬರಹಳ್ಳಿ, ಕುರೂಡಿ, ಮಂಚೇನಹಳ್ಳಿ, ನಗರಗೆರೆ, ಗೋಟಕಾನಪುರ, ಗುಯ್ಯಲಹಳ್ಳಿ, ಹಾಲಗಾನಹಳ್ಳಿ ಉರ್ದು ಶಾಲೆ, ಗುಡಿಬಂಡೆ ಭಾಗದ ಜಿಎಂಎಚ್‌ಪಿಎಸ್ ಮತ್ತು ಸೋಮೇನಹಳ್ಳಿ ಶಾಲೆ, ಶಿಡ್ಲಘಟ್ಟ ಭಾಗದ ಮಳ್ಳೂರು, ಜಂಗಮಕೋಟೆ, ಪಿಂಡಿಪಾಪನಹಳ್ಳಿ, ಬೈರಸಂದ್ರ, ಬೆಳ್ಳೂಟ್ಟಿ, ದೇವರಮಳ್ಳೂರು, ಮೇಲೂರು ಶಾಲೆ. ಈ ಎಲ್ಲ ಶಾಲೆಗಳು ಶತಮಾನ ಪೂರೈಸಿವೆ.

"ಬಡ ಮಕ್ಕಳ ಹಿತದೃಷ್ಟಿಯಿಂದ ಎಲ್ಲ ಸರ್ಕಾರಿ ಶಾಲೆಗಳಿಗೆ ಖಾಸಗಿ ಶಾಲೆಗಳನ್ನು ಮೀರಿಸುವ ರೀತಿಯಲ್ಲಿ ಮೂಲ ಸೌಕರ್ಯಗಳು ಸಿಗಬೇಕು. ಕನ್ನಡ ಮಾಧ್ಯಮ ಕಲಿಕೆಗೆ ಪೈಪೋಟಿಯ ವಾತಾವರಣ ನಿರ್ಮಿಸಬೇಕು. ಆಗ ಮಾತ್ರ ರಾಜ್ಯದಲ್ಲಿ ಉತ್ತಮ ಶೈಕ್ಷಣಿಕ ಪ್ರಗತಿ ಕಾಣಲು ಸಾಧ್ಯವಾಗುತ್ತದೆ."

- ವಿ.ರವಿಕುಮಾರ್, ಕನ್ನಡಸೇನೆ ಜಿಲ್ಲಾಧ್ಯಕ್ಷ, ಚಿಕ್ಕಬಳ್ಳಾಪುರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net