

ಹೂವಿನಹಡಗಲಿ: ನರೇಗಾ ಕೆಲಸಕ್ಕೆ ತೆರಳುವ ಮಹಿಳಾ ಕಾರ್ಮಿಕರ ಮಕ್ಕಳ ಅನುಕೂಲಕ್ಕಾಗಿ ಕೂಸಿನ ಮನೆ ಕಾರ್ಯನಿರ್ವಹಿಸಲಿವೆ ಎಂದು ತಾಪಂ ಇಒ ಉಮೇಶ್ ಮೈನಹಳ್ಳಿ ಹೇಳಿದರು.
ಇದನ್ನೂ ಓದಿ:ಜಿಪಂ ಪಿಡಿಯಿಂದ ಕೂಸಿನ ಮನೆ ಕೇಂದ್ರ ಪರಿಶೀಲನೆ
ನಂದಿಹಳ್ಳಿ ಗ್ರಾಮದಲ್ಲಿ ಗುರುವಾರ ಆಯೋಜಿಸಿದ್ದ ಕೂಸಿನಮನೆ ಉದ್ಘಾಟನೆ ಮಾಡಿ ಮಾತನಾಡಿದರು. ತಾಲೂಕಿನ 25 ಗ್ರಾಪಂಗಳಲ್ಲಿ ಕೂಸಿನ ಮನೆಗಳು ಕಾರ್ಯನಿರ್ವಹಿಸುತ್ತಿವೆ. ನರೇಗಾ ಯೋಜನೆಯಡಿ ಕೆಲಸ ಮಾಡುವಂತೆ ಮಹಿಳೆಯರಿಗೆ ಪ್ರೇರಣೆ ನೀಡಲು ಮತ್ತು ಮಕ್ಕಳ ಪಾಲನೆ ಜವಾಬ್ದಾರಿ ಕೂಸಿನ ಮನೆಯದ್ದಾಗಿದೆ. ಮಹಿಳಾ ಕಾರ್ಮಿಕರು 6 ತಿಂಗಳಿಂದ 3 ವರ್ಷದೊಳಗಿನ ಮಕ್ಕಳನ್ನು ಕೂಸಿನ ಮನೆಯಲ್ಲಿ ಬಿಡಬಹುದು. ಇಬ್ಬರು ಕೇರ್ ಟೇಕರ್‌ಗಳು ಮಕ್ಕಳ ಜವಾಬ್ದಾರಿ ನಿರ್ವಹಿಸುತ್ತಾರೆ. ಎಲ್ಲ ಸೌಲಭ್ಯಗಳನ್ನು ಒದಗಿಸಲಾಗಿದೆ ಎಂದರು.
ನರೇಗಾ ಸಹಾಯಕ ನಿರ್ದೇಶಕ ಡಿ.ವೀರಣ್ಣ ನಾಯ್ಕ, ಪಿಡಿಒ ಪ್ರಕಾಶ್ ಪೂಜಾರ್, ಗ್ರಾಪಂ ಅಧ್ಯಕ್ಷೆ ಶೈನಾಜ್, ಸದಸ್ಯರಾದ ಕಂಠಿ ವೀರೇಶ್, ಬಿ.ಚಂದ್ರಪ್ಪ, ಬಸವರಾಜ ಅಂಗಡಿ, ಎಚ್.ಮೈಲವ್ವ ಇತರರಿದ್ದರು.