ಜಿಪಂ ಪಿಡಿಯಿಂದ ಕೂಸಿನ ಮನೆ ಕೇಂದ್ರ ಪರಿಶೀಲನೆ

RAICHUR
RAICHUR
Published on

ರಾಯಚೂರು ತಾಲೂಕಿನ ಚಂದ್ರಬAಡಾ ಮತ್ತು ಆತ್ಕೂರು ಗ್ರಾಮ ಪಂಚಾಯತಿಗಳಿಗೆ ಜಿ¯್ಲÁ ಪಂಚಾಯತï ಯೋಜನಾ ನಿರ್ದೇಶಕ ಶರಣಬಸವರಾಜ ಕೆಸರಟ್ಟಿ ಅವರು ಬುಧವಾರ ಭೇಟಿ ನೀಡಿ ಕೂಸಿನ ಮನೆ ಕೇಂದ್ರಗಳನ್ನು ಪರಿಶೀಲನೆ ಮಾಡಿದರು.

ಮೊದಲಿಗೆ ತಾಲೂಕಿನ ಚಂದ್ರಬAಡ ಕೂಸಿನ ಮನೆ ಕೇಂದ್ರಕ್ಕೆ ಭೇಟಿ ನೀಡಿ, ಕೇಂದ್ರದಲ್ಲಿ ಒದಗಿಸಲಾಗಿರುವ ಸೌಲಭ್ಯಗಳ ಬಗ್ಗೆ ಪರಿಶೀಲನೆ ಮಾಡಿದರು. ಕೇಂದ್ರದಲ್ಲಿರುವ ಆರೈಕೆದಾರರೊಂದಿಗೆ ಮಾತನಾಡಿ, ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿರುವ ಬಗ್ಗೆ ಮಾಹಿತಿ ಪಡೆದು, ಪ್ರತಿ ದಿನ ಆಹಾರ ಮೇನು ಪ್ರಕಾರ ಮಕ್ಕಳಿಗೆ ಆಹಾರ ನೀಡಬೇಕು. ಕೇಂದ್ರಕ್ಕೆ ಬೇಕಾದ ಎ¯್ಲÁ ಅಗತ್ಯ ಸೌಕರ್ಯಗಳನ್ನು ಕಲ್ಪಿಸಲು ಕ್ರಮವಹಿಸಬೇಕು.

ಪ್ರತಿ ದಿನ ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಬೇಕು. ಕೇರï ಟೇಕರ್ಸï ಅವರಿಗೆ ಕಾಲಕಾಲಕ್ಕೆ ಕೂಲಿ ಪಾವತಿಸಲು ಕ್ರಮ ವಹಿಸಬೇಕು ಎಂದು ಗ್ರಾಮ ಪಂಚಾಯತಿ ಅಭಿವೃದ್ಧಿ ಅಽಕಾರಿಗಳಿಗೆ ಸೂಚನೆ ನೀಡಿದರು.

ನಂತರ ಕಟ್ಲೇಟ್ಕೂರು ಗ್ರಾಮಕ್ಕೆ ಭೇಟಿ ನೀಡಿ ಮಹಾತ್ಮಗಾಂಽ ನರೇಗಾ ಯೋಜನೆಯಡಿ ಮುಂದಿನ ಆರ್ಥಿಕ ವರ್ಷದಲ್ಲಿ ಅನುಷ್ಠಾನಗೊಸಲು ಗುರುತಿಸಲಾದ ಪ್ರೀ ಸೈಟï ಕಾಮಗಾರಿಯ ಅಕ್ಷಾಂಶ ರೇಖಾಂಶವನ್ನು ಪರಿಶೀಲನೆ ಮಾಡಿದರು.

ನಂತರ ಆತ್ಕೂರು ಗ್ರಾಮ ಪಂಚಾಯತಿಯ ಕಲವಲದೊಡ್ಡಿಯ ಕೂಸಿನ ಮನೆ ಕೇಂದ್ರಕ್ಕೆ ಭೇಟಿ ನೀಡಿ ಕೇಂದ್ರದಲ್ಲಿ ತಯಾರಿಸಿದ ಪೌಷ್ಟಿಕ ಆಹಾರವನ್ನು ಸೇವಿಸಿ ಗುಣಮಟ್ಟವನ್ನು ಪರಿಶೀಲಿಸಿದರು. ಮಕ್ಕಳಿಗೆ ಪ್ರತಿ ದಿನ ಪೌಷ್ಟಿಕ ಆಹಾರ ಒದಗಿಸಬೇಕೆಂದು ಈ ವೇಳೆ ಆರೈಕೆದಾರರಿಗೆ ಸೂಚನೆ ನೀಡಿದರು.

ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕರಾದ ಶಿವಪ್ಪ ಸೇರಿ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net