ಇನ್ನೋವಾ ಕಾರಿನಲ್ಲಿ ಸಾಗಿಸುತ್ತಿದ್ದ 64 ಲಕ್ಷ ರೂ., ವಶಕ್ಕೆ !

Amount
Published on

ತುಮಕೂರು: ಶಿರಾ ತಾಲೂಕು ಕಳ್ಳಂಬೆಳ್ಳ ಚೆಕ್ ಪೋಸ್ಟ್ ಬಳಿ ಖಾಸಗಿ ವಾಹನದಲ್ಲಿ ಬ್ಯಾಗ್‌ನಲ್ಲಿ ಕೊಂಡೊಯ್ಯುತ್ತಿದ್ದ 64.40 ಲಕ್ಷ ರೂ.,ಗಳನ್ನು ಚುನಾವಣಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನಿಂದ ಚನ್ನಗಿರಿಗೆ ಇನ್ನೋವಾದಲ್ಲಿ ಮೂವರು ಪಯಣಿಸುತ್ತಿದ್ದ ವಾಹನವನ್ನು ತಪಾಸಣೆಗೊಳಪಡಿಸಿದಾಗ ನಗದು ಪತ್ತೆಯಾಗಿದೆ. ಕಾರಿನಲ್ಲಿ ಯಾವುದೇ ಚುನಾವಣಾ ಪ್ರಚಾರ ಸಾಮಗ್ರಿಗಳಾಗಲಿ ಪತ್ತೆಯಾಗಿಲ್ಲ.

ದೊಡ್ಡಮೊತ್ತದ ನಗದು ಸಿಕ್ಕ ಹಿನ್ನೆಲೆಯಲ್ಲಿ ಚುನಾವಣಾ ಸಿಬ್ಬಂದಿ ತಕ್ಷಣವೇ ಆದಾಯ ತೆರಿಗೆ ನೋಡಲ್ ಅಧಿಕಾರಿಗೆ ಮಾಹಿತಿ ನೀಡಿದ್ದು ಖಜಾನೆಗೆ ಹಣವನ್ನು ಪಡೆಯಲಾಗಿದೆ. ಚುನಾವಣಾಧಿಕಾರಿ ಡಾ.ಕೆ.ನಂದಿನಿದೇವಿ, ಸಹಾಯಕ ಚುನಾವಣಾಧಿಕಾರಿ ಮಮತಾ, ಕೇಂದ್ರ ಚುನಾವಣಾ ಆಯೋಗದ ವೆಚ್ಚ ವೀಕ್ಷಕರಾದ ಮೃತ್ಯುಂಜಯ ಸೇನಿ ಸೇರಿದಂತೆ ಚೆಕ್ ಪೋಸ್ಟ್ ಸಿಬ್ಬಂದಿ ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net