

ತುಮಕೂರು: ಉತ್ತರ ಸಿಕ್ಕಿಂನ ಲಾಚೆನ್ ಪ್ರದೇಶದಲ್ಲಿರುವ 17500 ಅಡಿ ಎತ್ತರದ
ಬ್ರುಮ್ ಖಾಂಗ್ಸಿ ಶಿಖರದ ಚಾರಣವನ್ನು ಸವೋರ್ದಯ ಕಾಲೇಜಿನ ದ್ವೀತಿಯ ಪಿಯುಸಿ ವಿದ್ಯಾರ್ಥಿಗಳಾದ ಸಾರ್ಜೆಂಟ್ ಟಿ.ಎಂ.ನಿರಂಜನ್ ಹಾಗೂ ಸಾರ್ಜೆಂಟ್ ಎಲ್.ಎಸ್. ನಿತಿನ್ಗೌಡ ಯಶಸ್ವಿಯಾಗಿ ಪೂರ್ಣಗೊಳಿಸಿದ್ದಾರೆ. ಈ ಸಾಧನೆ ಮಾಡಿದ ಅತಿ ಕಿರಿಯ ವಯಸ್ಸಿನ ಎನ್ಸಿಸಿ ವಿದ್ಯಾರ್ಥಿಗಳು ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಸಿಕ್ಕಿಂ ರಾಜ್ಯದ ಚೆಮ್ಚಿಯಲ್ಲಿರುವ ಐಎಚ್ಸಿಎಇ ಸಂಸ್ಥೆಯವರ ಸಹಯೋಗದಿಂದ ಎನ್ಸಿಸಿ ನಿರ್ದೇಶನಾಲಯ ಏರ್ಪಡಿಸಿದ್ದ ಪರ್ವತಾರೋಹಣಕ್ಕೆ ದೇಶದ ನಾನಾ ರಾಜ್ಯಗಳು ಒಟ್ಟು 46 ವಿದ್ಯಾರ್ಥಿಗಳು ಆಯ್ಕೆಯಾಗಿದ್ದು 4ನೇ ಕರ್ನಾಟಕ ಎನ್ಸಿಸಿ ಬೆಟಾಲಿಯನ್ ತುಮಕೂರು ಶಾಖೆಯಲ್ಲಿ ತರಬೇತಿ ಪಡೆಯುತ್ತಿದ್ದ ಸವೋರ್ದಯ ಕಾಲೇಜಿನ ವಿದ್ಯಾರ್ಥಿಗಳಿದ್ದರು.
ಒಟ್ಟು 28 ದಿನಗಳ ಚಾರಣದಲ್ಲಿ ವಿವಿಧ ರೀತಿಯಲ್ಲಿ ತರಬೇತಿಯನ್ನು ಚಾರಣಿಗರಿಗೆ ನೀಡಿ ಅವರನ್ನು ಸಾಹಸಕ್ಕೆ ಸಜ್ಜುಗೊಳಿಸಲಾಯಿತು. ಮೊದಲನೇ ದಿನ ಸ್ಥಳಿಯ ಹವಾಗುಣಕ್ಕೆ ಹೊಂದಿಕೊಳು ್ಳವಂತೆ ದೈಹಿಕ ಹಾಗೂ ಆರೋಗ್ಯದ ಸಾಮರ್ಥ್ಯ ಪರೀಕ್ಷಿಸಲಾಯಿತು. ನಂತರ ಹಿಮಾಲಯದ ಬಗ್ಗೆ ಸಾಕ್ಷ್ಯ ಚಿತ್ರ. ಪರ್ವತಾರೋಹಣಕ್ಕೆ ಬೇಕಾಗುವ ವಿಶೇಷ ಉಡುಗೆಗಳನ್ನು ನೀಡಲಾಯಿತು. 20 ಕೆ.ಜಿ ಗಿಂತ ಹೆಚ್ಚಿನ ಭಾರವನ್ನು ಪ್ರತಿ ದಿನ 8 ರಿಂದ 10 ಕಿ.ಮೀ., ಹೊರಬಲ್ಲ ಅಭ್ಯಾಸ ಮಾಡಿಸಲಾಯಿತು. ಎರಡನೇ ದಿನ ಸ್ಥಳಿಯವಾಗಿ ಚಾರಣ ಅಭ್ಯಾಸ ಮಾಡಿಸಿ ದೈಹಿಕ, ಮಾನಸಿಕವಾಗಿ ಸಿದ್ಧಗೊಳಿಸಲಾಯಿತು ಎನ್ನುತ್ತಾರೆ ನಿರಂಜನ್.
ರಾತ್ರಿ ಸಮಯದಲ್ಲಿ ಬೀಸುವ ಹಿಮಗಾಳಿ, ಹಿಮಪಾತಗಳ ಹೊಡೆತದಿಂದ ಬಳಲಿದೆವು. ಕೆಲವೊಂದು ದಿನ ಇಡೀ ರಾತ್ರಿ ನಿದ್ದೆ ಇಲ್ಲದಂತಾಯಿತು. ಪ್ರತಿ ದಿನ 3 ಲೀಟರ್ ಕುದಿಸಿ ಆರಿಸಿದ ನೀರನ್ನು ಕೊಡಲಾಗುತ್ತಿತ್ತು. 17500 ಅಡಿ ಎತ್ತರದ ಬ್ರುಮ್ಖಾಂಗ್ಸಿ ಶಿಖರ ಏರಿನಿಂತಾಗ ಮೋಡಗಳ ಮೇಲೆ ಹೆಜೆ ಇಟ್ಟಿ ಅನುಭವ ತಂದುಕೊಟ್ಟಿತ್ತು. ಮುಂದೊಮ್ಮೆ ಅವಕಾಶ ಸಿಕ್ಕರೆ ಮೌಂಟ್ ಎವರೆಸ್ಟ್ ಏರುವ ಆಸೆಯಿದೆ ಎನ್ನುತ್ತಾರೆ ನಿತಿನ್ಗೌಡ.