ಮೆಕ್ಯಾನಿಕಲ್ ವಿಭಾಗಕ್ಕೆ ಎನ್‌ಬಿಎ ಮಾನ್ಯತೆ

blm (3)
Published on

ಶಿರ್ವ: ಬಂಟಕಲ್ಲಿನ ಶ್ರೀ ಮಧ್ವ ವಾದಿರಾಜ ತಾಂತ್ರಿಕ ಮಹಾವಿದ್ಯಾಲಯದ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗವು ಮೂರು ವರ್ಷಗಳ ಅವಧಿಗೆ ರಾಷ್ಟ್ರೀಯ ಮಾನ್ಯತಾ ಮಂಡಳಿಯಿಂದ ಮಾನ್ಯತೆ ಪಡೆದಿದ್ದು, ಇಂಜಿನಿಯರಿಂಗ್ ಶಿಕ್ಷಣದಲ್ಲಿ ಶ್ರೇಷ್ಠತೆ ಮತ್ತು ನಿರಂತರ ಗುಣಮಟ್ಟ ಸುಧಾರಣೆಗೆ ಅದರ ಬದ್ಧತೆಯನ್ನು ಗುರುತಿಸಿದೆ.

ಭಾರತ ಸರ್ಕಾರದ ಅಡಿಯಲ್ಲಿ ರಾಷ್ಟ್ರೀಯ ಮಾನ್ಯತಾ ಮಂಡಳಿ (ಎನ್‌ಬಿಎ) ಅತ್ಯುನ್ನತ ಸ್ವಾಯತ್ತ ಸಂಸ್ಥೆಯಾಗಿದ್ದು, ಇದು ಭಾರತದಲ್ಲಿ ತಾಂತ್ರಿಕ ಶಿಕ್ಷಣ ಸಂಸ್ಥೆಗಳು ನೀಡುವ ಪದವಿಗಳ ಗುಣಾತ್ಮಕ ಸಾಮರ್ಥ್ಯವನ್ನು ನಿರ್ಣಯಿಸುತ್ತದೆ. 2025-26 ಶೈಕ್ಷಣಿಕ ವರ್ಷದಿಂದ ಜಾರಿಗೆ ಬರುವ ಈ ಪ್ರತಿಷ್ಠಿತ ವಾನ್ಯತೆಯನ್ನು ಎನ್‌ಬಿಎ ತಜ್ಞರ ತಂಡವು ನಡೆಸಿದ ಕಠಿಣ ಮೌಲ್ಯ ಮಾಪನ ಪ್ರಕ್ರಿಯೆಯ ನಂತರ ನೀಡಲಾಯಿತು.

ಮೆಕ್ಯಾನಿಕಲ್ ವಿಭಾಗದ ಶೈಕ್ಷಣಿಕ ಪ್ರಕ್ರಿಯೆ, ಅಧ್ಯಾಪಕರ ಅರ್ಹತೆ, ಮೂಲಸೌಕರ್ಯ, ಫಲಿತಾಂಶ, ಸಂಶೋಧನಾ ಚಟುವಟಿಕೆ ಮತ್ತು ಉದ್ಯಮ ಸಹಯೋಗಗಳನ್ನು ಆಧರಿಸಿದೆ.

ಈ ಮಾನ್ಯತೆಯಿಂದ ಪದವೀಧರರಿಗೆ ಸುಧಾರಿತ ಉದ್ಯೋಗಾವಕಾಶಗಳು, ಸರ್ಕಾರದ ಸಂಶೋಧನಾ ನಿಧಿಗೆ ಅರ್ಹತೆ ಮತ್ತು ಅಂತಾರಾಷ್ಟ್ರೀಯ ಸಹಯೋಗಕ್ಕೆ ಹೆಚ್ಚಿನ ಅವಕಾಶಗಳು ಸೇರಿದಂತೆ ಎನ್‌ಬಿಎ ಮಾನ್ಯತೆ ಮೆಕ್ಯಾನಿಕಲ್ ವಿಭಾಗಕ್ಕೆ ಹಲವು ರೀತಿಯಲ್ಲಿ ಸಹಾಯ ವಾಡುತ್ತದೆ.

ಈ ಸಾಧನೆಗೆ ಸಂಸ್ಥೆಯ ಆಡಳಿತ ಮಂಡಳಿ, ಶ್ರೀ ಸೋದೆ ವಾದಿರಾಜ ಮಠ ಶಿಕ್ಷಣ ಸಂಸ್ಥೆಗಳ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಪ್ರೊ.ಡಾ.ರಾಧಾಕೃಷ್ಣ ಎಸ್.ಐತಾಳ್ ಮತ್ತು ಸಂಸ್ಥೆ ಪ್ರಾಂಶುಪಾಲ ಪ್ರೊ.ಡಾ.ತಿರುಮಲೇಶ್ವರ ಭಟ್ ಅವರು ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಅಧ್ಯಾಪಕರು ಮತ್ತು ಸಿಬ್ಬಂದಿಯನ್ನು ಅಭಿನಂದಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net