

ಕುಂದಾಪುರ: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಮಹಿಳೆಯರ ನತೆಯ ಮೇಲೆ ದಾಳಿಗಳನ್ನು ತೀವ್ರಗೊಳಿಸಿದೆ. ಅಸವಾನತೆ ಬಲಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಸವಾನತೆಗಾಗಿನ ಹೋರಾಟವನ್ನು ಬಲಗೊಳಿಸುವ ಜವಾಬ್ದಾರಿಯನ್ನು ಎಲ್ಲರು ನಿರ್ವಹಿಸಬೇಕಿದೆ ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಟನೆ ರಾಜ್ಯ ಉಪಾಧ್ಯಕ್ಷೆ ಕೆ.ಎಸ್.ಲಕ್ಷ್ಮೀ ಹೇಳಿದರು.
ಕುಂದಾಪುರದ ಹಂಚು ಕಾರ್ಮಿಕರ ಭವನದಲ್ಲಿ ಸೋಮವಾರ ನಡೆದ ಅಖಿಲ ಭಾರತ ಜನವಾದಿ ಮಹಿಳಾ ಸಂಟನೆ ಉಡುಪಿ ಜಿಲ್ಲಾ ಸಮಿತಿಯ ದ್ವಿತೀಯ ಜಿಲ್ಲಾ ಸಮ್ಮೇಳನದಲ್ಲಿ ಮಾತನಾಡಿದರು.
ರಾಜ್ಯ ಪ್ರಧಾನ ಕಾರ್ಯದರ್ಶಿ ದೇವಿ ವಾತನಾಡಿ, ಆಳುವ ಸರ್ಕಾರಗಳಿಗೆ ಮಹಿಳೆಯರ ಸುರಕ್ಷತೆ ಆದ್ಯತೆಯಾಗುತ್ತಿಲ್ಲ. ಮಹಿಳೆಯರ ಕುರಿತಾದ ಜನಪ್ರತಿನಿಧಿಗಳ ಮನೋಭಾವ ಬದಲಾಗಬೇಕು ಎಂದರು.
ಜಿಲ್ಲಾಧ್ಯಕ್ಷೆ ಸರೋಜಾ ಅಧ್ಯಕ್ಷತೆ ವಹಿಸಿದ್ದರು. ಸಿಐಟಿಯು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ವಾತನಾಡಿದರು. ಜಿಲ್ಲೆಯ ವಿವಿಧ ವಲಯಗಳಿಂದ ಆಗಮಿಸಿದ್ದ ಮಹಿಳಾ ಪ್ರತಿನಿಧಿಗಳು ಜಿಲ್ಲೆಯ ಮಹಿಳೆಯರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಿದರು.
ಸಮ್ಮೇಳನದಲ್ಲಿ 23 ಸದಸ್ಯರ ನೂತನ ಜಿಲ್ಲಾ ಸಮಿತಿಯನ್ನು ಆಯ್ಕೆ ವಾಡಲಾಗಿದ್ದು ಅಧ್ಯಕ್ಷರಾಗಿ ಸರೋಜಾ, ಕಾರ್ಯದರ್ಶಿಯಾಗಿ ಶೀಲಾವತಿ ಹಾಗೂ ಖಜಾಂಚಿಯಾಗಿ ಲಲಿತಾ ಆಯ್ಕೆಯಾದರು. ಕಟ್ಟಡ ನಿರ್ವಾಣ ಕಾರ್ಮಿಕರ ಮುಖಂಡ ಚಂದ್ರಶೇಖರ್ ಉಪಸ್ಥಿತರಿದ್ದರು.
ಸುಶೀಲಾ ಉಪ್ಪುಂದ ಸ್ವಾಗತಿಸಿ, ಸುಮನಾ ನಾಡಾ ವಂದಿಸಿದರು. ಜಿಲ್ಲಾ ಕಾರ್ಯದರ್ಶಿ ಶೀಲಾವತಿ ನಿರ್ವಹಿಸಿದರು.