ನಾಯರಿ ಸಂಘ ವಾರ್ಷಿಕ ಮಹಾಸಭೆ

nayir
Published on

ಕೋಟ: ಬ್ರಹ್ಮಾವರ ಕರ್ನಾಟಕ ರಾಜ್ಯ ನಾಯರಿ ಸಮಾಜ ಸುಧಾರಕ ಸಂಘದ 44ನೇ ವಾರ್ಷಿಕ ಮಹಾಸಭೆ ಇತ್ತೀಚೆಗೆ ಸಾಲಿಗ್ರಾಮ ಕಾರ್ಕಡ ನಾಯರಿ ಸಮುದಾಯ ಭವನದಲ್ಲಿ ಅಧ್ಯಕ್ಷ ಎಂ.ಚಂದ್ರಶೇಖರ್ ನಾಯರಿ ಮಟಪಾಡಿ ಅಧ್ಯಕ್ಷತೆಯಲ್ಲಿ ನಡೆಯಿತು.

*ನೂತನ ಆಡಳಿತ ಮಂಡಳಿ ರಚನೆ: ಅಧ್ಯಕ್ಷರಾಗಿ ಪ್ರಭಾಕರ್ ನಾಯರಿ ಕಿರಿಮಂಜೇಶ್ವರ, ಗೌರವಾಧ್ಯಕ್ಷ ಮಂಜುನಾಥ ನಾಯರಿ ಕಾರ್ತಟ್ಟು, ಶಿವಕುಮಾರ್ ಕಾರ್ಕಡ, ಲಿಂಗಯ್ಯ ನಾಯರಿ ಮಟಪಾಡಿ, ಉಪಾಧ್ಯಕ್ಷ ದಿನೇಶ್ ನಾಯರಿ ಬ್ರಹ್ಮಾವರ, ಶ್ಯಾಮ ಸುಂದರ್ ನಾಯರಿ ಕಾರ್ತಟ್ಟು, ಲೆಕ್ಕಪರಿಶೋಧಕ ಮುರುಳೀಧರ್ ನಾಯರಿ ಕಾರ್ಕಡ, ಕಾರ್ಯದರ್ಶಿ ಕೆ.ವಿಜಯ ಕಾರ್ಕಡ, ಕೋಶಾಧಿಕಾರಿ ಜಯರಾಮ್ ನಾಯರಿ ಮಟಪಾಡಿ, ಜತೆ ಕಾರ್ಯದರ್ಶಿ ಎಂ.ಮಂಜುನಾಥ ನಾಯರಿ ಬ್ರಹ್ಮಾವರ, ಸರಸ್ವತಿ ನಾಯರಿ ಕಿರಿಮಂಜೇಶ್ವರ, ಸಂಘಟನಾ ಕಾರ್ಯದರ್ಶಿ ಉಮೇಶ್ ನಾಯರಿ ಕಾರ್ತಟ್ಟು, ಅಶೋಕ್ ನಾಯರಿ ಕಿರಿಮಂಜೇಶ್ವರ, ಪವನ್‌ಕುಮಾರ್ ಮಟಪಾಡಿ ಆಯ್ಕೆಯಾದರು.

ವಿದ್ಯಾರ್ಥಿವೇತನ ವಿತರಣೆ

ಸಮಾಜದ ಏಳು ಜನ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು. ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಅಧಿಕ ಅಂಕ ಗಳಿಸಿದ ಸಮಾಜದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ನೀಡಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net