ಕುಂದಾಪುರ: ಸ್ಟಾರ್ ಎಜುಕೇಷನ್ ಅವಾರ್ಡ್ ಕೊಡಮಾಡುವ 2024ನೇ ಸಾಲಿನ ರಾಷ್ಟ್ರೀಯ ಮಟ್ಟದ ಬೆಸ್ಟ್ ಪ್ರಿನ್ಸಿಪಾಲ್ ಪ್ರಶಸ್ತಿಯನ್ನು ಹಟ್ಟಿಯಂಗಡಿ ಶ್ರೀ ಸಿದ್ಧಿವಿನಾಯಕ ವಸತಿ ಶಾಲೆ ಪ್ರಾಂಶುಪಾಲ ಶರಣಕುಮಾರ ಪಡೆದರು.

ಮುಂಬೈನ ಎಫ್‌ಎಫ್‌ಒ ಪ್ರೈ. ಲಿಮಿಟೆಡ್ ನಿರ್ದೇಶಕ ಅಲಾಖ್ ಸಿಂಗ್ ಅವರಿಂದ ಪ್ರಶಸ್ತಿ ಸ್ವೀಕರಿಸಿದರು. 2024ರ ಶೈಕ್ಷಣಿಕ ವರ್ಷ ಶಿಕ್ಷಣ ಕ್ಷೇತ್ರದಲ್ಲಿ ಉತ್ಕೃಷ್ಟ ಸಾಧನೆ, ಅಸಾಧಾರಣ ನಾಯಕತ್ವ, ಕರ್ತವ್ಯದಲ್ಲಿ ಅಚಲ ನಿಷ್ಠೆ, ಸೃಜನಾತ್ಮಕತೆ, ಪ್ರಕೃತಿ ಸಂರಕ್ಷಣೆಗೆ ವಿನೂತನ ಶೈಕ್ಷಣಿಕ ಕಾರ್ಯಕ್ರಮಗಳು ಇತ್ಯಾದಿ ಮಾನದಂಡಗಳ ಆಧಾರದ ಮೇಲೆ ಈ ಪ್ರಶಸ್ತಿ ನೀಡಲಾಗುತ್ತಿದೆ.
ಸಂಸ್ಥೆ ಆಡಳಿತಾಧಿಕಾರಿ ವೀಣಾ ರಶ್ಮೀ ಎಂ. ಉಪಪ್ರಾಂಶುಪಾಲ ರಾಮ ದೇವಾಡಿಗ, ಶಿಕ್ಷಕ ಹಾಗೂ ಶಿಕ್ಷಕೇತರರು ಮತ್ತು ವಿದ್ಯಾರ್ಥಿಗಳು ಪ್ರಾಂಶುಪಾಲರನ್ನು ಅಭಿನಂದಿಸಿದ್ದಾರೆ.