ಇಂದಿನಿಂದ ಶ್ರೀಕಾಶಿ ವಿಶ್ವೇಶ್ವರಸ್ವಾಮಿ ದೇವಸ್ಥಾನದಲ್ಲಿ ನವರಾತ್ರಿ ಉತ್ಸವ

08M.D.R.8
Published on

ಮದ್ದೂರು: ಪಟ್ಟಣದ ಪುರಾಣ ಪ್ರಸಿದ್ಧ ಶ್ರೀಕಾಶಿ ವಿಶ್ವೇಶ್ವರಸ್ವಾಮಿ ದೇವಸ್ಥಾನ (ಹಳೇ ಬಸ್ ನಿಲ್ದಾಣದ ಹತ್ತಿರ)ದಲ್ಲಿ ಅ.3ರಿಂದ ನವರಾತ್ರಿ ಉತ್ಸವ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಪ್ರಧಾನ ಅರ್ಚಕ ರಾಘವೇಂದ್ರ ಪುರೋಹಿತ ತಿಳಿಸಿದ್ದಾರೆ.


ಅ.3ರಿಂದ 12ರವರೆಗೆ ಪ್ರತಿದಿನ ದೇವಸ್ಥಾನದಲ್ಲಿ ವಿಶಾಲಾಕ್ಷಿ ಅಮ್ಮನವರಿಗೆ ವಿಶೇಷ ಪೂಜಾ ಕಾರ್ಯಕ್ರಮಗಳು ನೆರವೇರಲಿದ್ದು, ಸಂಜೆ 5.30ಕ್ಕೆ ಲಲಿತಾ ಸಹಸ್ರನಾಮ ಪಾರಾಯಣ, ದೇವಿ ಪಾರಾಯಣ, ಶಿವ-ಪಾರ್ವತಿ ಉತ್ಸವ, ರಾತ್ರಿ 8 ಗಂಟೆಗೆ ಮಹಾಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗವಿರಲಿದೆ ಎಂದು ತಿಳಿಸಿದ್ದಾರೆ


ನವರಾತ್ರಿಯ ಪ್ರಯುಕ್ತ ದೇವಸ್ಥಾನದ ಆವರಣದಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ನವದುರ್ಗಿ ವೇಷ ಭೂಷಣ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.


ಅ.6ರಂದು ಕಲಾ ಸಾಧನ ನೃತ್ಯಶಾಲೆಯ ವಿದುಷಿ ಎಸ್.ಚಂದನಶ್ರೀ ಅವರ ಶಿಷ್ಯ ವೃಂದದಿಂದ ಭರತನಾಟ್ಯ ಕಾರ್ಯಕ್ರಮ ಇರಲಿದೆ.
ಅ.7ರಂದು ಶ್ರುತಿ ಸಾಗರ ಭಜನಾ ಮಂಡಳಿ ಅವರಿಂದ ಭಜನೆ ಹಾಗೂ ನೃತ್ಯ ಕಾರ್ಯಕ್ರಮ, ಅ.8ರಂದು ಕೀರ್ತನ ಕಲಾ ವಿಶಾರದ ಹರಿಕಥಾರತ್ನ, ಆಕಾಶವಾಣಿ, ದೂರದರ್ಶನ ಕಲಾವಿದ, ಹರಿಕಥಾ ವಿದ್ವಾನ್ ಶ್ರೀಸೀತಾರಾಮ್ ಮುನಿ ಕೋಟಿ ಅವರಿಂದ ಶ್ರೀದೇವಿ ಮಹಾತ್ಮೆ ಎಂಬ ಕಥಾ ಕೀರ್ತನ, ಸಂಗೀತೋಪನ್ಯಾಸ (ಹರಿಕಥೆ) ಕಾರ್ಯಕ್ರಮ ಏರ್ಪಡಿಸಲಾಗಿದೆ.


ಅ.10ರಂದು ನವದುರ್ಗಿ ವೇಷಭೂಷಣ ಕಾರ್ಯಕ್ರಮ ಹಾಗೂ ಮದ್ದೂರಿನ ಬಿಡಿಸಿ ನೃತ್ಯ ಶಾಲಾ ವತಿಯಿಂದ ನೃತ್ಯ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ರಾಘವೇಂದ್ರ ಪುರೋಹಿತ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net