

ಕಟೀಲು: ಇಲ್ಲಿನ ಶ್ರೀ ದುರ್ಗಾಪರಮೇಶ್ವರೀ ದೇಗುಲದಲ್ಲಿ ಅ.3ರಿಂದ 13ರ ತನಕ ನವರಾತ್ರಿ ಉತ್ಸವ ನಡೆಯಲಿದೆ.
ದಿನಂಪ್ರತಿ ಹಗಲಿನಲ್ಲಿ ವಿವಿಧ ಭಜನಾ ತಂಡಗಳಿಂದ ಭಜನೆ, ಸಂಜೆ 5ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಜೆ 7ರಿಂದ ದಶಾವತಾರ ಕಥೆಯನ್ನಾಧರಿಸಿದ ಯಕ್ಷಗಾನ ಬಯಲಾಟಗಳು ನಡೆಯಲಿವೆ. ಅ.3ರಂದು ತುಳು ತಾಳಮದ್ದಳೆ, ಅ.4ರಂದು ಸುಮಂಗಲಾ ರತ್ನಾಕರ್ ತಂಡದಿಂದ ಭರತನಾಟ್ಯ, ಅ.5ರಂದು ಚಿನ್ಮಯ ಮನೀಶ್‌ರಿಂದ ಶಾಸ್ತ್ರೀಯ ಸಂಗೀತ, ಅ.6ಕ್ಕೆ ಯಕ್ಷಪಲ್ಲವಿ ತಂಡದಿಂದ ಬಡುಗುತಿಟ್ಟು ಯಕ್ಷಗಾನ, ಅ.7ಕ್ಕೆ ಉತ್ಪಲ ಡಿ.ಬಿ. ಅವರಿಂದ ಭರತನಾಟ್ಯ, ಅ.8ರಂದು ಲಲಿತಾಪಂಚಮಿ, ತಾಳಮದ್ದಳೆ, ಅ.9ಕ್ಕೆ ಮೂಲಾನಕ್ಷತ್ರ ಶಾರದಾಪೂಜೆಯಂದು ಭಾರತೀ ಸುರೇಶ್‌ರಿಂದ ಭರತನಾಟ್ಯ, ಅ.10ಕ್ಕೆ ಬೆಂಗಳೂರು ತಂಡದಿಂದ ಯಕ್ಷಗಾನ, ಅ.11ಕ್ಕೆ ರಕ್ಷಾ ಕಾರ್ತಿಕ್‌ರಿಂದ ಭರತನಾಟ್ಯ, ಅ.12ರಂದು ಮಹಾನವಮಿ, ವಿನಯ್ ಎಸ್.ಆರ್. ಅವರಿಂದ ಶಾಸ್ತೀಯ ಸಂಗೀತ, ಅ.13ರಂದು ವಿಜಯದಶಮಿ, ಮಧ್ವಜಯಂತಿ, ಸೌಮ್ಯಾ ಸುಧೀಂದ್ರ ರಾವ್ ಅವರಿಂದ ಭರತನಾಟ್ಯ ನಡೆಯಲಿದೆ.