ಸವಣೂರಿನಲ್ಲಿ ವಿಶ್ವ ಹಿರಿಯರ ದಿನಾಚರಣೆ : ನಾಟಿ ವೈದ್ಯ ವಾಸುದೇವ ಇಡ್ಯಾಡಿಗೆ ಸನ್ಮಾನ

Kdb_Elderly day
Published on

ಕಡಬ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಕಡಬ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಕಡಬ, ಪ್ರಗತಿಬಂಧು ಸ್ವಸಹಾಯ ಸಂಘಗಳು ಒಕ್ಕೂಟ ಸವಣೂರು ವಲಯ ಇವುಗಳ ಜಂಟಿ ಆಶ್ರಯದಲ್ಲಿ ವಿಶ್ವ ಹಿರಿಯರ ದಿನಾಚರಣೆ ಮತ್ತು ನಾಟಿವೈದ್ಯ ವಾಸುದೇವ ಇಡ್ಯಾಡಿ ಸನ್ಮಾನ ಕಾರ್ಯಕ್ರಮ ಮಂಗಳವಾರ ಇಡ್ಯಾಡಿಯಲ್ಲಿ ನಡೆಯಿತು.

ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್‌ನ ಅಧ್ಯಕ್ಷ ಮಹೇಶ್ ಕೆ.ಸವಣೂರು ಅಧ್ಯಕ್ಷತೆ ವಹಿಸಿದ್ದರು. ನಾಟಿ ವೈದ್ಯ ವಾಸುದೇವ ಇಡ್ಯಾಡಿ ದಂಪತಿಯನ್ನು ಸನ್ಮಾನಿಸಲಾಯಿತು. ಯೋಜನೆಯ ಕಡಬ ತಾಲೂಕು ಯೋಜನಾಧಿಕಾರಿ ಮೇದಪ್ಪ ಗೌಡ ನಾವೂರು ಸನ್ಮಾನ ನೆರವೇರಿಸಿದರು.

ಅಟಲ್‌ಜೀ ಚಾರಿಟೆಬಲ್ ಟ್ರಸ್ಟ್‌ನ ರಾಕೇಶ್ ರೈ ಕೆಡೆಂಜಿ ಸುಳ್ಯ, ಪುತ್ತೂರು ಎಪಿಎಂಸಿ ಮಾಜಿ ಅಧ್ಯಕ್ಷ ದಿನೇಶ್ ಮೆದು, ಪುಣ್ಚಪ್ಪಾಡಿ ಸಮರ್ಥ ಜನ ಸೇವ ಟ್ರಸ್ಟ್‌ನ ಅಧ್ಯಕ್ಷ ಗಿರಿಶಂಕರ್ ಸುಲಾಯ, ಸವಣೂರು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಕೃಷ್ಣ ಭಟ್ ಕುಕ್ಕುಜೆ, ಸವಣೂರು ಪ್ರಾಥಮಿಕ ಕೃಷಿ ಪತ್ತಿನ ಸಹಕರಿ ಸಂಘದ ಅಧ್ಯಕ್ಷ ತಾರಾನಾಥ ಕಾಯರ್ಗ, ನಿರ್ದೇಶಕ ಗಂಗಾಧರ ಪೆರಿಯಡ್ಕ, ಪತ್ರಕರ್ತ ಉಮಾಪ್ರಸಾದ್ ರೈ ನಡುಬೈಲು, ಸವಣೂರು ಪೆರಿಯಡ್ಕ ಪ್ರಗತಿಬಂಧು ಸ್ವಸಹಾಯ ಸಂಘಗಳ ಒಕ್ಕೂಟದ ಅಧ್ಯಕ್ಷ ಹೊನ್ನಪ್ಪ ಗೌಡ ಜಾರಿಗೆತ್ತಡಿ ಉಪಸ್ಥಿತರಿದ್ದರು.

ವೀಣಾ ಕೆ.ಸ್ವಾಗತಿಸಿ, ಪ್ರೇಮ ಆರೆಲ್ತಾಡಿ ಸನ್ಮಾನ ಪತ್ರ ಓದಿದರು, ಮೀನಾಕ್ಷಿ ಸವಣೂರು ವಂದಿಸಿದರು, ರಾಜೇಶ್ ಇಡ್ಯಾಡಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net