

ಕಾಸರಗೋಡು: ಸಣ್ಣ ತಿರುಪತಿ ಎಂದೇ ಖ್ಯಾತಿ ಪಡೆದಿರುವ ಕಾಸರಗೋಡು ಪೇಟೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸೆ.22ರಿಂದ ಅ.2ರವರೆಗೆ ಜರುಗಲಿರುವ ನವರಾತ್ರಿ ಮಹೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ ದೇವಸ್ಥಾನದಲ್ಲಿ ಜರುಗಿತು.
ಕ್ಷೇತ್ರ ತಂತ್ರಿವರ್ಯ ಉಳಿಯತ್ತಾಯ ವಿಷ್ಣು ಅಸ್ರರವರು ವೇದಮೂರ್ತಿ ವಾಸುದೇವ ಕೊಳತ್ತಾಯ ಅವರಿಗೆ ಆಮಂತ್ರಣ ಪತ್ರಿಕೆ ಹಸ್ತಾಂತರಿಸುವ ಮೂಲಕ ಬಿಡುಗಡೆಗೊಳಿಸಿದರು. ಕ್ಷೇತ್ರ ಸಮಿತಿ ಪ್ರಮುಖರಾದ ಡಾ.ಕೆ.ಎನ್.ವೆಂಕಟ್ರಮಣ ಹೊಳ್ಳ, ಕೆ.ಎನ್.ರಾಮಕೃಷ್ಣ ಹೊಳ್ಳ, ಕೆ.ವಿ.ಶ್ರೀನಿವಾಸ ಹೊಳ್ಳ, ಲಕ್ಷ್ಮೀಶ್ ಭಟ್, ತುಕರಾಮ ಆಚಾರ್ಯ ಕೆರೆಮನೆ, ಮಹೇಶ್ ಭಟ್, ಪುರಂದರ ಶೆಟ್ಟಿ, ಕೃಷ್ಣ ಮನ್ನಿಪ್ಪಾಡಿ, ಕೆ.ವಿ.ತಿರುಮಲೇಶ್ ಹೊಳ್ಳ, ಕೆ.ವಿ.ಶೇಷಾದ್ರಿ ಹೊಳ್ಳ, ರವಿ ಕೇಸರಿ, ಕಿಶೋರ್‌ಕುಮಾರ್, ಲಕ್ಷ್ಮೀಕಾಂತ್ ಬೀರಂತಬೈಲ್, ವೇಣು ಕೊರಕ್ಕೋಡು ಮಾತೃ ಸಮಿತಿಯ ರೂಪಕಲಾ ಹೊಳ್ಳ, ಶ್ರೀದೇವಿ ಎಸ್.ರಾವ್, ಸವಿತಾ ಕಿಶೋರ್, ಸೌಮ್ಯಾ ಶಂಕರ, ಪ್ರೇಮಾ ಪುರಂದರ, ಗೀತಾ ತುಕರಾಮ, ರೂಪಕಲಾ ಲಕ್ಷ್ಮೀಶ್, ಸುಚಿತ್ರಾ ಮಹೇಶ್, ಶ್ರೀವಳ್ಳಿ ಮೊದಲಾದವರು ಉಪಸ್ಥಿತರಿದ್ದರು.