

ಕಡಬ: ಕಾಣಿಯೂರು ಶ್ರೀ ಜಗದ್ಗುರು ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾಸಂಸ್ಥಾನಮ್ ಉಡುಪಿ ಶ್ರೀ ಕಾಣಿಯೂರು ರಾಮತೀರ್ಥ ಮಠದ ಶ್ರೀ ಅಮ್ಮನವರ ಕ್ಷೇತ್ರದಲ್ಲಿ ಅ.3ರಂದು ಪ್ರಾರಂಭಗೊಂಡಿರುವ ನವರಾತ್ರಿ ಉತ್ಸವವು ಅ.12ರ ವರೆಗೆ ನಡೆಯಿತು.
3ರಂದು ವಿವಿಧ ಧಾರ್ಮಿಕ ಕಾರ್ಯಕ್ರಮ, ಭಜನಾ ಕಾರ್ಯಕ್ರಮಗಳಿಗೆ ಅದ್ದೂರಿಯಾಗಿ ಚಾಲನೆ ನೀಡಲಾಯಿತು. ಅರ್ಚಕ ಪ್ರಕಾಶ್ ಭಟ್ ಅವರು ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸಿದರು.
ಕಾಣಿಯೂರು ಮಠದ ವ್ಯವಸ್ಥಾಪಕರು, ಸಲಹಾ ಸಮಿತಿ ಪ್ರಧಾನ ಕಾರ್ಯದರ್ಶಿ ಆಗಿರುವ ಶ್ರೀನಿಧಿ ಆಚಾರ್ಯ ಸಲಹಾ ಸಮಿತಿ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ, ಅಜಿತ್ ಆಚಾರ್ಯ ಸೇರಿದಂತೆ ಸಲಹಾ ಸಮಿತಿ ಮಾರ್ಗದರ್ಶಕರು, ಪದಾಧಿಕಾರಿಗಳು, ಸದಸ್ಯರು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು, ಊರ, ಪರವೂರ ಭಕ್ತಗಳು ಭಾಗವಹಿಸಿದ್ದರು.
ನವರಾತ್ರಿ ಉತ್ಸವದಲ್ಲಿ ಪ್ರತಿದಿನ ರಾತ್ರಿ ವಿವಿಧ ಭಜನಾ ತಂಡಗಳಿಂದ ಭಜನೆ, ಆಕರ್ಷಕ ಕುಣಿತ ಭಜನೆ, ಚಾರ್ವಾಕ ಶ್ರೀ ಕಪಿಲೇಶ್ವರ ಸಿಂಗಾರಿ ಮೇಳದವರಿಂದ ಚೆಂಡೆ ವಾದನ ಮೆರುಗು ನೀಡಿತು.