

ವಿಜಯವಾಣಿ ಸುದ್ದಿಜಾಲ ಮಂದಾರ್ತಿ
ಒಂದು ಗ್ರಾಮವನ್ನು ದತ್ತು ಸ್ವೀಕರಿಸಿ ಅದನ್ನು ಅಭಿವೃದ್ಧಿಪಡಿಸುವುದು, ಸ್ಮಶಾನ, ಗೋಶಾಲೆ ಮತ್ತಿತರ ಅಭಿವೃದ್ಧಿ ಕಾರ್ಯಕ್ರಮಗಳ ಮೂಲಕ ಗ್ರಾಮ ವಿಕಾಸದ ಪರಿಕಲ್ಪನೆಯಲ್ಲಿ ಸ್ಥಾಪನೆಗೊಂಡ ಸಂಘ ಗ್ರಾಮೀಣ ಜನರಿಗೆ ಆರ್ಥಿಕ ತಿಳಿವಳಿಕೆ ಮಹತ್ವ ತಿಳಿಸಿ ಜನರನ್ನು ಸ್ವಾವಲಂಬಿತರನ್ನಾಗಿ ಮಾಡುವುದು ಮುಖ್ಯ ಉದ್ದೇಶ ಎಂದು ನವಭಾರತ್ ಸೌಹಾರ್ದ ಸಹಕಾರಿ ಸಂಘ ಅಧ್ಯಕ್ಷ ಪ್ರಮೋದ್ ಕುಮಾರ್ ಶೆಟ್ಟಿ ಹೇಳಿದರು.
ಹೆಗ್ಗುಂಜೆ ಗ್ರಾಪಂ ಸಮುದಾಯಭವನದಲ್ಲಿ ನವಭಾರತ್ ಸೌಹಾರ್ದ ಸಹಕಾರಿ ಸಂಘ ಮೈರ್ಕೋಮೆ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಭಾನುವಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕ ರಾಜ್ಯ ಸೌಹಾರ್ದ ಸಂಯುಕ್ತ ಸಹಕಾರಿ ಬೆಂಗಳೂರು ನಿರ್ದೇಶಕ ಮಂಜುನಾಥ ಎಸ್.ಕೆ.ಸಾಲಿಗ್ರಾಮ, ಸಂಘದ ಉಪಾಧ್ಯಕ್ಷ ವಿಶ್ವನಾಥ ಶಾಸ್ತ್ರಿ, ನಿರ್ದೇಶಕರಾದ ಶರತ್‌ಚಂದ್ರ ಶೆಟ್ಟಿ, ಪುರುಶೋತ್ತಮ ಉಡುಪ, ಪ್ರಶಾಂತ, ಗಿರೀಶ್ ಆಚಾರ್, ಜಗದೀಶ ನಾಯ್ಕ, ನಾಗೇಶ, ಶರತ ನಾಯ್ಕ, ಸತೀಶ ಕುಲಾಲ, ಬಾಲಕೃಷ್ಣ, ಲತಾ, ಸಂಘದ ಸಿಬ್ಬಂದಿ ಅಶ್ವಿತಾ, ವಿಜಯ, ಚೈತನ್ಯ, ನಿತ್ಯನಿಧಿ ಸಂಗ್ರಾಹಕರು, ಸಂಘದ ಸದಸ್ಯರು, ಗ್ರಾಹಕರು ಉಪಸ್ಥಿತರಿದ್ದರು. ಶರತ್ ನಾಯ್ಕ ಸ್ವಾಗತಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ದಿನೇಶ ಎಂ. ವರದಿ ಮಂಡಿಸಿದರು. ಅಶ್ವಿತಾ ಕಾರ್ಯಕ್ರಮ ನಿರೂಪಿಸಿ, ವೃತ್ತಿಪರ ನಿರ್ದೇಶಕ ಪ್ರಶಾಂತ್ ವಂದಿಸಿದರು.
ಸಂಘ ವರದಿ ವರ್ಷದಲ್ಲಿ ರೂ.7,89,988.23ಪೈಸೆ ಲಾಭಗಳಿಸಿದ್ದು, 1638 ಜನ ಸದಸ್ಯರಿದ್ದಾರೆ. ಅನಾರೋಗ್ಯ ಪೀಡಿತ, ತಲತ್ಸೇಮಿಯಾ, ಕ್ಯಾನ್ಸರ್, ದೃಷ್ಟಿದೋಷ, ಮಾನಸಿಕ ಅಸ್ವಸ್ಥ ಬಡಕುಟುಂಬಕ್ಕೆ ಸಹಾಯಧನ ನೀಡಲಾಯಿತು.