ನಾಳೆಯಿಂದ ನವರಾತ್ರಿ ಕಾರ್ಯಕ್ರಮಗಳು

Published on

ಬೇಲೂರು: ಪಟ್ಟಣದ ಶ್ರೀ ಶೃಂಗೇರಿ ಶಂಕರ ಮಠದಲ್ಲಿ ನವರಾತ್ರಿ ಅಂಗವಾಗಿ ಅ.15ರಿಂದ 28ರವರೆಗೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಮಠದ ಕಾರ್ಯದರ್ಶಿ ಸುಬ್ರಹ್ಮಣ್ಯ ಹೇಳಿದರು.


ಪಟ್ಟಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರತಿ ವರ್ಷದಂತೆ ಈ ಬಾರಿಯೂ ಅ.28 ರವರೆಗೆ ನವರಾತ್ರಿ ಕಾರ್ಯಕ್ರಮಗಳು ಜರುಗಲಿವೆ. ಪ್ರತಿದಿನ ಮುಂಜಾನೆ ಹೋಮಗಳು ನಡೆಯಲಿವೆ. ಅ.22ರಂದು ಚಂಡಿಕಾ ಹೋಮ, ಸಾಂಸ್ಕೃತಿಕ ಕಾರ್ಯಕ್ರಮ, ಅಷ್ಟ ವದನ ಸೇವೆ, ರಥೋತ್ಸವ, ಅಭಿಷೇಕ, ಅನ್ನಸಂತರ್ಪಣೆ ಕಾರ್ಯಕ್ರಮಗಳು ನಡೆಯಲಿವೆ ಎಂದರು.


ವೇದಬ್ರಹ್ಮ ಕೆ.ಆರ್. ಮಂಜುನಾಥ್ ಮಾತನಾಡಿ, ಬೇಲೂರು ಶ್ರೀ ಶೃಂಗೇರಿ ಶಂಕರ ಮಠದಲ್ಲಿ ಕಳೆದ 2 ವರ್ಷಗಳಿಂದ ಹೋಮ-ಹವನಗಳನ್ನು ಕಾರಣಾಂತರದಿಂದ ನಡೆಸಿರಲಿಲ್ಲ. ಈ ವರ್ಷ ಚಂಡಿಕಾ ಹೋಮ, ನವಗ್ರಹ, ಲಲಿತಹೋಮ ನಡೆಯಲಿವೆ. ನವರಾತ್ರಿ ಪ್ರಯುಕ್ತ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಈ ಬಾರಿ ಹೆಚ್ಚಿನ ಭಕ್ತರು ಆಗಮಿಸುವ ನಿರೀಕ್ಷೆಯಿದೆ ಎಂದರು.


ಶ್ರೀ ಶೃಂಗೇರಿ ಶಂಕರ ಮಠದ ಅನಂತು, ಮಹದೇವ್ ರಾವ್, ಕುಲಕರ್ಣಿ, ರವೀಂದ್ರ, ಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net