ಪುರಾತನ ಶ್ರೀ ಮಾರಿಯಮ್ಮ ದೇವಸ್ಥಾನ ಬಾಕಿಮಾರು ಗದ್ದೆಯಲ್ಲಿ ಬಾಕಿಮಾರು ಗದ್ದೆಯಲ್ಲಿ ನೇಜಿ ನಾಟಿ

Neji naati
ಪುರಾತನ ಶ್ರೀ ಮಾರಿಯಮ್ಮ ದೇವಸ್ಥಾನ ಮತ್ತು ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ನೇಜಿ ನೆಡುವ ಕಾರ್ಯಕ್ರಮ ಜರುಗಿತು.
Published on


ಸುರತ್ಕಲ್: ನವದುರ್ಗಾ ಫ್ರೆಂಡ್ಸ್ ಸರ್ಕಲ್ ರಥಬೀದಿ ಸುರತ್ಕಲ್ ಮತ್ತು ತ್ರೈರೂಪಿಣಿ ಮಹಿಳಾ ಮಂಡಳಿ ನೇತೃತ್ವದಲ್ಲಿ ಇತಿಹಾಸ ಪ್ರಸಿದ್ಧ ಪುರಾತನ ಶ್ರೀ ಮಾರಿಯಮ್ಮ ದೇವಸ್ಥಾನ ಮತ್ತು ಶ್ರೀ ವೀರಭದ್ರ ದುರ್ಗಾಪರಮೇಶ್ವರಿ ದೇವಸ್ಥಾನದ ಬಾಕಿಮಾರು ಗದ್ದೆಯಲ್ಲಿ ನೇಜಿ ನೆಡುವ ಕಾರ್ಯಕ್ರಮ ಜರುಗಿತು.

ಮಾರಿಯಮ್ಮನ ಸನ್ನಿಧಿಯಲ್ಲಿ ನೇಜಿಯನ್ನಿಟ್ಟು ಕ್ಷೇತ್ರದ ಅರ್ಚಕರು ಪ್ರಾರ್ಥಿಸಿದರು. ಬಳಿಕ ನವದುರ್ಗಾ ಫ್ರೆಂಡ್ಸ್ ಸರ್ಕಲ್ ಗೌರವಾಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಕ್ಷೇತ್ರದ ಆಡಳಿತ ಸಮಿತಿ ಅಧ್ಯಕ್ಷ ಉಸ್ತಾದ್ ಕೇಶವ ಪಿ.ಶೆಟ್ಟಿಗಾರ್, ಕೋಶಾಧಿಕಾರಿ ಓಂಪ್ರಕಾಶ್ ಡಿ. ಶೆಟ್ಟಿಗಾರ್ ಕಡಂಬೋಡಿ, ಕೃಷಿ ಕಾರ್ಯದ ಉಸ್ತುವಾರಿ ಸುರೇಶ್ ಪಿ.ಶೆಟ್ಟಿಗಾರ್ ದೇವರ ಪ್ರಸಾದ ಹಾಕಿ ಬಾಕಿಮಾರು ಗದ್ದೆಗಿಳಿದು ನೇಜಿ ನೆಡುವ ಮೂಲಕ ಚಾಲನೆ ನೀಡಿದರು.

ಹಿರಿಯರಾದ ಭವಾನಿ, ದಮಯಂತಿ, ಪ್ರೇಮಾ ಮಾರ್ಗದರ್ಶನದಲ್ಲಿ ಊರಿನ ಯುವಕರು, ಮಹಿಳೆಯರು, ಜಂಟಿ ಸಂಸ್ಥೆಯ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net