ಎಲ್ಲೆಡೆ ನವರಾತ್ರಿ ಸಂಭ್ರಮ : ಘಟ ಸ್ಥಾಪನೆ, ದೀಪ ಹಾಕಿ ದೇವಿಯ ಆರಾಧನೆ ಶುರು

ಕಲಬುರಗಿ ನವರಾತ್ರಿ ಹಬ್ಬದ ಸಂಭ್ರಮ ಎಲ್ಲಡೆ ಕಳೆಗಟ್ಟಿದೆ. ನಗರ ಸೇರಿದಂತೆ ಜಿಲ್ಲೆಯಲ್ಲಿ ದಸರಾ ಮತ್ತು ನಾಡ ಹಬ್ಬದ ಝಲಕ್ ಜೋರಾಗಿದೆ. ಶಕ್ತಿ ದೇವತೆಯಾಗಿರುವ ದೇವಿಯ ಆರಾಧನೆ ಶ್ರದ್ಧಾಭಕ್ತಿಯಿಂದ ನಡೆದಿದೆ. ಮನೆಗಳಲ್ಲಿ ದೇವಿಯ ಆರಾಧನೆಯ ಭಾಗವಾಗಿ ಘಟ ಸ್ಥಾಪನೆ, ದೀಪ ಹಾಕುವುದು ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಶುರುವಾದವು. ದೇವಾಲಯಗಳಲ್ಲಿ ದೇವಿಗೆ ವಿಶೇಷ ಅಲಂಕಾರ ಮಾಡಿದ್ದು ಕಂಡು ಭಾವಪರವಾಗುತ್ತಿದ್ದಾರೆ. ಎಲ್ಲಿಯೂ ಬರದ ಕರಿ ನೆರಳು ಹಬ್ಬದ ಮೇಲೆ ಆವರಿಸಿಲ್ಲ.
IMG-20231016-WA0008
Published on

ಎಲ್ಲಡೆ ಶಕ್ತಿದೇವತೆ ಆರಾಧನೆ | ಎಲ್ಲೆಡೆ ಅಂಬೆ ಜಗದಂಬೆಯ ಸ್ಮರಣೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ನವರಾತ್ರಿ ಹಬ್ಬದ ಸಂಭ್ರಮ ಎಲ್ಲಡೆ ಕಳೆಗಟ್ಟಿದೆ. ನಗರ ಸೇರಿದಂತೆ ಜಿಲ್ಲೆಯಲ್ಲಿ ದಸರಾ ಮತ್ತು ನಾಡ ಹಬ್ಬದ ಝಲಕ್ ಜೋರಾಗಿದೆ. ಶಕ್ತಿ ದೇವತೆಯಾಗಿರುವ ದೇವಿಯ ಆರಾಧನೆ ಶ್ರದ್ಧಾಭಕ್ತಿಯಿಂದ ನಡೆದಿದೆ. ಮನೆಗಳಲ್ಲಿ ದೇವಿಯ ಆರಾಧನೆಯ ಭಾಗವಾಗಿ ಘಟ ಸ್ಥಾಪನೆ, ದೀಪ ಹಾಕುವುದು ಇನ್ನಿತರ ಧಾರ್ಮಿಕ ಕಾರ್ಯಕ್ರಮಗಳು ಶುರುವಾದವು. ದೇವಾಲಯಗಳಲ್ಲಿ ದೇವಿಗೆ ವಿಶೇಷ ಅಲಂಕಾರ ಮಾಡಿದ್ದು ಕಂಡು ಭಾವಪರವಾಗುತ್ತಿದ್ದಾರೆ. ಎಲ್ಲಿಯೂ ಬರದ ಕರಿ ನೆರಳು ಹಬ್ಬದ ಮೇಲೆ ಆವರಿಸಿಲ್ಲ.
ದಸರಾ ಹಬ್ಬದ ನವರಾತ್ರಿ ಅಂಗವಾಗಿ ನಗರದ ಹಲವು ಕಡೆಗಳಲ್ಲಿ ದೇವಿಯ ವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡುವ ಕಾರ್ಯ ಭಾನುವಾರ ಬೆಳಗಿನಿಂದ ರಾತ್ರಿಯವರೆಗೂ ಭರ್ಜರಿಯಾಗಿ ಜರುಗಿತು.  ಒಂಬತ್ತು ದಿನದ ವಿಶಿಷ್ಟ ಉತ್ಸವ. ಹಬ್ಬ ಆಚರಿಸುವ ಮನೆಗಳಲ್ಲಿ ಎಲ್ಲಿಲ್ಲದ ಸಂಭ್ರಮ ಕಂಡು ಬರುತ್ತಿದೆ. ಇನ್ನೂ ಮನೆಗಳಲ್ಲಿ ಬೆಳಗ್ಗೆಯಿಂದಲೇ ದೇವಿಗೆ ವಿಶೇಷ ಪೂಜೆ ಮೊದಲಾದವನ್ನು ಮಾಡಲಾಯಿತು. ಶಕ್ತಿ ದೇವತೆಯ ದೇವಾಲಯಗಳಲ್ಲಿ ವಿಶೇಷ ಅಲಂಕಾರ ಮಾಡಲಾಗಿದೆ. ಎಲ್ಲರನ್ನು ರಕ್ಷಿಸು, ಬರ ನೀಗಿಸಿ  ಎಲ್ಲರಿಗೂ ಒಳಿತಾಗಲಿ ಭಕ್ತರು ದೇವಿಗೆ ಮೊರೆ ಹೋಗುತ್ತಿದ್ದಾರೆ.
ದುಷ್ಟ ಶಕ್ತಿಗಳ ಸಂಹಾರಕ್ಕಾಗಿ ಆದಿಶಕ್ತಿ ದೇವತೆ ಅವತರಿಸಿ ಧರೆಗೆ ಬಂದು ಕೆಟ್ಟ ಶಕ್ತಿಗಳನ್ನು ಸಂಹಾರ ಮಾಡಿದ್ದರ ಸ್ಮರಣೆ ಮತ್ತು ನಾಡಹಬ್ಬ ನವರಾತ್ರಿ ಉತ್ಸವ ಎಲ್ಲಡೆ ಜರ‍್ದಾರ್ ಆಗಿ ನಡೆದಿದೆ.  ತೊಗರಿ ನಾಡು ಕಲಬುರಗಿ ಜಿಲ್ಲೆಯ ಭಕ್ತರು ಅಂಬಾಭವಾನಿ, ತುಳಜಾಭವಾನಿ, ಜಗದಂಬಾ, ಚಾಮುಂಡೇಶ್ವರಿ,ಯಲ್ಲಮ್ಮ, ಶ್ರೀದೇವಿ ಮೊದಲಾದ ಹೆಸರಿನಲ್ಲಿ ಶಕ್ತಿ ದೇವತೆಗಳ ಆರಾಧನೆ ಇತರ ಧಾರ್ಮಿಕ ಕಾರ್ಯಗಳು ಶ್ರದ್ಧಾ ಭಕ್ತಿಯಿಂದ ಮಾಡುತ್ತಿದ್ದಾರೆ. ನಿರಂತರ ಜ್ಯೋತಿ ಪ್ರಜ್ವಲಿಸುತ್ತದೆ. ಭಕ್ತರು ಎಣ್ಣೆ ಜತೆ ತುಪ್ಪದ ದೀಪ ಉರಿಸಲಾಗುತ್ತಿದೆ.  ಘಟ ಸ್ಥಾಪನೆ, ದೀಪ ಹಾಕಿದವರ ಮನೆಗಳಲ್ಲಿ ೯ ದಿನಗಳ ಕಾಲ ಮದ್ಯ ಮಾಂಸ ಸೇವನೆಗೆೆ ಅವಕಾಶ ಇರುವುದಿಲ್ಲ.
ರಾಮ ಮಂದಿರ ಬಳಿಯ ಚಂದ್ರಶೇಖರ ಪಾಟೀಲ್ ರೇವೂರ ಸರ್ಕಲ್, ಹಳೆಯ ಜೇವರ್ಗಿ ರಸ್ತೆಯ ಪಂಚಶೀಲ ನಗರ, ಭವಾನಿ ತರುಣ ಸಂಘಟದವರು  ಪಿಆ್ಯಂಡ್ ಟಿ ಕ್ವಾಟರ್ಸ್ ಮುಖ್ಯರಸ್ತೆಯಲ್ಲಿ, ಶಹಾಬಜಾರದ ಮರಗಮ್ಮ ಗುಡಿ ಹತ್ತಿರ, ಬ್ರಹ್ಮಪುರ ವಿವಿಧ ಬಡಾವಣೆಗಳಲ್ಲಿ, ರಾಘವೇಂದ್ರ ನಗರ, ಗಂಜ್ ಕಾಲನಿ, ಸೇಡಂ ರಸ್ತೆ, ಹುಮನಾಬಾದ ರಸ್ತೆ ಸೇರಿದಂತೆ ಹಲವು ಕಡೆಗಳಲ್ಲಿ  ಸಾರ್ವಜನಿಕವಾಗಿ ದೇವಿಯವಿಗ್ರಹಗಳನ್ನು ಪ್ರತಿಷ್ಠಾಪನೆ ಮಾಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net