ರಾಷ್ಟ್ರೀಕೃತ ಬ್ಯಾಂಕ್​ ಶಾಖೆ ಆರಂಭಿಸಲಿ

JAGADISH SHETER
Published on

ಕೌಜಲಗಿ: ಪಟ್ಟಣದಲ್ಲಿ ರಾಷ್ಟ್ರೀಕೃತ ಬ್ಯಾಂಕ್​ ಶಾಖೆ ಆರಂಭಿಸುವಂತೆ ಒತ್ತಾಯಿಸಿ ಕೌಜಲಗಿ ಮುಖಂಡರು ಕುಲಗೋಡ ಗ್ರಾಮದಲ್ಲಿ ಸಂಸದ ಜಗದೀಶ ಶೆಟ್ಟರ್​ ಅವರಿಗೆ ಮಂಗಳವಾರ ಮನವಿ ಸಲ್ಲಿಸಿದರು.

25 ಸಾವಿರಕ್ಕೂ ಅಧಿಕ ಜನಸಂಖ್ಯೆ ಹೊಂದಿದ ಕೌಜಲಗಿ ಹೋಬಳಿ ಕೇಂದ್ರವಾಗಿದೆ. ಸಾವಿರಾರು ಹೆಕ್ಟೇರ್​ ಪ್ರದೇಶದಲ್ಲಿ ಕಬ್ಬು ಬೆಳೆಯಲಾಗುತ್ತದೆ. ಅಲ್ಲದೆ, ನೂರಾರು ವಾಣಿಜ್ಯ ಮಳಿಗೆ ಒಳಗೊಂಡು ನಿತ್ಯ ಲಾಂತರ ರೂ. ವ್ಯಾಪಾರ&ವಹಿವಾಟು ನಡೆಯುತ್ತದೆ. ಈ ಬಗ್ಗೆ ಶಾಸಕರು ಹಾಗೂ ಹಿಂದಿನ ಸಂಸದರಿಗೆ ಸಾಕಷ್ಟು ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ. ಹೀಗಾಗಿ, ಶ್ರೀವೇ ಕೌಜಲಗಿಯಲ್ಲಿ ರಾಷ್ಟ್ರೀಕೃತ ಬ್ಯಾಂಕ್​ ಆರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.

ಮನವಿ ಸ್ವೀಕರಿಸಿದ ಸಂಸದ ಶೆಟ್ಟರ್​, ಈ ಬಗ್ಗೆ ಕೂಡಲೇ ಸಂಬಂಧಿಸಿದ ಅಧಿಕಾರಿಗಳೊಂದಿಗೆ ಚರ್ಚಿಸಿ ಕೌಜಲಗಿಗೆ ರಾಷ್ಟ್ರೀಕೃತ ಬ್ಯಾಂಕ್​ ಶಾಖೆ ಆರಂಭಿಸುವಲ್ಲಿ ಪ್ರಯತ್ನಿಸುತ್ತೇನೆ ಎಂದರು.

ಅಜಯ ಲೋಕಣ್ಣವರ, ಬಸವರಾಜ ಹಿರೇಮಠ, ರಮೇಶ ಮಾಳಿ, ದಿನೇಶ ಪಟ್ಟಣಶೆಟ್ಟಿ, ವಿಜಯ ಲೋಕಣ್ಣವರ, ಅರವಿಂದ ಸೊಗಲದ, ರಮೇಶ ಇಟ್ನಾಳ, ಮನೋಜ ಕೇರುಶೆಟ್ಟಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net