ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಆರ್ಟ ಅಕಾಡೆಮಿ ಮಕ್ಕಳ ಸಾಧನೆ

27ALD04
ಅಳವಂಡಿ ವಲಯದ ಕರಾಟೆ ಪಟುಗಳಾದ ಆಫ್ರಿನಾಬಾನು, ಅಶ್ರಪ್ ಅಲಿ, ಯಲ್ಲಪ್ಪ ಮೇಟಿ, ವಿರೂಪಾಕ್ಷಪ್ಪ ಜತೆ ತರಬೇತುದಾರರಾದ ಮಂಜು ಭಜಂತ್ರಿ, ರಾಜೇಶ್ವರಿ ಭಜಂತ್ರಿ.
Published on

ಅಳವಂಡಿ: ಲಕ್ಷ್ಮೇಶ್ವರದಲ್ಲಿ ನಡೆದ 8ನೇ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್‌ಶಿಪ್ ಸ್ಪರ್ಧೆಯಲ್ಲಿ ಅಳವಂಡಿ ಹೋಬಳಿಯ ಬೆಳಗಟ್ಟಿ ಗ್ರಾಮದ ಆಫ್ರಿನಾಬಾನು ಚಕ್ಕಡಿ ಕಟಾ ಸ್ಪರ್ಧೆಯಲ್ಲಿ (ಪ್ರಥಮ), ಪೈಟ್‌ನಲ್ಲಿ (ತೃತೀಯ), ಅಶ್ರಪ್‌ಅಲಿ ಮೇಗಳಮನಿ ಕಟಾ ಮತ್ತು ಫೈಟ್ ಸ್ಪರ್ಧೆಯಲ್ಲಿ (ದ್ವಿತೀಯ),

ಬೈರಾಪುರದ ಯಲ್ಲಪ್ಪ ಮೇಟಿ ಕಟಾ ಮತ್ತು ಫೈಟ್ ಸ್ಪರ್ಧೆಯಲ್ಲಿ (ಪ್ರಥಮ), ಕವಲೂರಿನ ವಿರೂಪಾಕ್ಷಪ್ಪ ಸಂಕಣ್ಣವರ ಕಟಾ ಹಾಗೂ ಫೈಟ್ ಸ್ಪರ್ಧೆಯಲ್ಲಿ (ಪ್ರಥಮ) ಸ್ಥಾನ ಪಡೆದಿದ್ದಾರೆ. ಇವರು, ಮುಂಡರಗಿಯ ಮಂಜು ಡೈಮಂಡ್ ಮಿಕ್ಸ್ ಮಾರ್ಷಲ್ ಆರ್ಟ್ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದು, ತರಬೇತುದಾರರಾದ ಮಂಜು ಭಜಂತ್ರಿ, ರಾಜೇಶ್ವರಿ ಭಜಂತ್ರಿ ತರಬೇತಿ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net