More

    ಕರಾಟೆ ಸ್ಪರ್ಧೆಯಲ್ಲಿ ಕಲಘಟಗಿ ಮಕ್ಕಳ ಸಾಧನೆ

    ಕಲಘಟಗಿ: ಹುಬ್ಬಳ್ಳಿಯ ಅಸ್ಪಾ್ಯರ ಕರಾಟೆ ಅಕಾಡೆಮಿ ಹಾಗೂ ಡಿಕಾತ್​ಲ್ಯಾನ್ ಸ್ಪೋರ್ಟ್ಸ್ ವತಿಯಿಂದ ಭಾನುವಾರ ಆಯೋಜಿಸಿದ್ದ ಜಿಲ್ಲಾಮಟ್ಟದ ಕರಾಟೆ ಚಾಂಪಿಯನ್ ಶಿಪ್ ಟೂರ್ನಿಯಲ್ಲಿ ಕಲಘಟಗಿ ಅನ್ನಪೂರ್ಣಾ ತರಬೇತಿ ಸಂಸ್ಥೆಯ ಮಕ್ಕಳು ಉತ್ತಮ ಸಾಧನೆ ಮಾಡಿದ್ದಾರೆ.

    ಪಟ್ಟಣದ ಅನ್ನಪೂರ್ಣಾ ತರಬೇತಿ ಸಂಸ್ಥೆಯ 14 ಮಕ್ಕಳು ಟೂರ್ನಿಯಲ್ಲಿ ಭಾಗವಹಿಸಿ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನ ಸೇರಿ ಒಟ್ಟು 25 ವಿಭಾಗಗಳಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

    ಕಟಾ ಚಾಂಪಿಯನ್​ನಲ್ಲಿ ಅನ್ನಪೂರ್ಣಾ ಹರಮಣ್ಣವರ, ವೈಷ್ಣವಿ ಪೂಜಾರ ಪ್ರಥಮ ಬಹುಮಾನ, ನಯನ ಹರಮಣ್ಣವರ, ತೇಜನ್ ಕುಲಕರ್ಣಿ, ಶ್ರೇಯಸ್ ಗುಂಡೇನಹಳ್ಳಿ ದ್ವಿತೀಯ ಬಹುಮಾನ, ವಿಜಯಲಕ್ಷ್ಮಿ ಹರಮಣ್ಣವರ, ನಿರ್ಮಯ ಗೌಡರ, ಸೂರ್ಯ ಚಿಕ್ಕಣ್ಣವರ, ವರ್ಷ ತಹಶೀಲ್ದಾರ್, ತೇಜಸ್ ಗುಂಡೇನಹಳ್ಳಿ, ನಿಜನಗೌಡರ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ.

    ಕುಮಿಟೆ (ಫೈಟ್) ವಿಭಾಗದಲ್ಲಿ ನಯನ ಹರಮಣ್ಣವರ, ಸೂರ್ಯ ಚಿಕ್ಕಣ್ಣವರ, ತೇಜಸ್ ಗುಂಡೇನಹಳ್ಳಿ, ತೇಜಸ್ ಕುಲಕರ್ಣಿ ಪ್ರಥಮ ಬಹುಮಾನ, ವರ್ಷ ತಹಶೀಲ್ದಾರ್, ಸಿಂಚನಾ ರೆಡ್ಡೇರ, ಅನ್ನಪೂರ್ಣಾ ಹರಮಣ್ಣವರ, ನಿರ್ಮಯ ಗೌಡರ, ವಿಜಯಲಕ್ಷ್ಮೀ ಹರಮಣ್ಣವರ, ನಿಸರ್ಗ ಗೌಡರ ದ್ವಿತೀಯ ಬಹುಮಾನ, ನಿಜನ ಗೌಡರ, ರಿಷಿಕಾ ಏಳುಕೊಳ್ಳಿ, ಶ್ರೇಯಸ್ ಗುಂಡೇನಹಳ್ಳಿ, ವೈಷ್ಣವಿ ಪೂಜಾರ ತೃತೀಯ ಬಹುಮಾನ ಪಡೆದುಕೊಂಡಿದ್ದಾರೆ. ಮಕ್ಕಳಿಗೆ ತರಬೇತುದಾರ ಶರಣಪ್ಪ ಬಮ್ಮಿಗಟ್ಟಿ ತರಬೇತಿ ನೀಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts