More

    ತಪಾಸಣೆಯಿಂದ ಆರೋಗ್ಯ ಸುಧಾರಣೆ

    ಕಲಘಟಗಿ: ಗ್ರಾಮೀಣ ಭಾಗದ ಜನಸಾಮಾನ್ಯರಿಗೆ ಆರೋಗ್ಯ ಸುಧಾರಿಸಿಕೊಳ್ಳಲು ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು ಉಚಿತ ಆರೋಗ್ಯ ಶಿಬಿರ ಆಯೋಜಿಸಿದ್ದು, ಜನರು ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ವಿಧಾನ ಪರಿಷತ್ ಮಾಜಿ ಸದಸ್ಯ ನಾಗರಾಜ ಛಬ್ಬಿ ಹೇಳಿದರು.
    ತಾಲೂಕಿನ ತಾವರಗೇರಿ ಗ್ರಾಮದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಪ್ರೇರಿತ ಕ್ಷಮತಾ ಸೇವಾ ಸಂಸ್ಥೆ ಹಾಗೂ ಭಾರತೀಯ ವೈದ್ಯಕೀಯ ಸಂಘದ ಆಶ್ರಯದಲ್ಲಿ ಸೋಮವಾರ ಆಯೋಜಿಸಿದ್ದ ಬೃಹತ್ ಉಚಿತ ವೈದ್ಯಕೀಯ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು. ಹೃದಯ ಕಾಯಿಲೆ, ಕಣ್ಣಿನ ತಪಾಸಣೆ, ಸ್ತ್ರೀರೋಗ, ಎಲುಬು ಮತ್ತು ಕೀಲು, ಚಿಕ್ಕ ಮಕ್ಕಳ ತಜ್ಞರು ಸೇರಿ ವಿಶೇಷ ತಜ್ಞರಿದ್ದು, ಉಚಿತ ವೈದ್ಯಕೀಯ ಸಲಹೆ ಮತ್ತು ಚಿಕಿತ್ಸೆ ನೀಡಲಾಗುವುದು ಎಂದರು. ಶಿಬಿರದಲ್ಲಿ ಡಾ. ಅಮಿತ್ ಸತ್ತೂರ, ಡಾ. ಶ್ರೀನಿವಾಸ ಜೋಶಿ, ಡಾ. ಮೂಲ್ಕಿ ಪಾಟೀಲ, ಡಾ. ಆನಂದ ವರ್ಮಾ, ಡಾ. ರವೀಂದ್ರ ತಪಾಸಣೆ ನಡೆಸಿದರು. ತಾವರಗೇರಿ ಸಿದ್ಧಾರೂಢಮಠದ ನಿರ್ಗುಣಾನಂದ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಗ್ರಾಪಂ ಅಧ್ಯಕ್ಷೆ ಅನಸವ್ವ ಕಾಮಧೇನು, ಬಿಜೆಪಿ ಗ್ರಾಮಾಂತರ ಜಿಲ್ಲಾಧ್ಯಕ್ಷ ನಿಂಗಪ್ಪ ಸುತಗಟ್ಟಿ, ತಾಲೂಕಾಧ್ಯಕ್ಷ ಬಸವರಾಜ ಶೇರೆವಾಡ, ಎಸ್‌ಡಿಎಂಸಿ ಅಧ್ಯಕ್ಷ ಸಿದ್ದಪ್ಪ ಹೊನ್ನಿಹಳ್ಳಿ, ಗುರುನಾಥಗೌಡ್ರ ಬಸನಗೌಡ್ರ, ಐ.ಸಿ. ಗೋಕುಲ, ಮೌನೇಶ ಬಡಿಗೇರ, ಮಮತಾ ತಿಪ್ಪಣ್ಣವರ, ಕಲ್ಲಪ್ಪ ಪುಟ್ಟಪ್ಪನವರ, ಶಶಿಧರ ಹುಲಿಕಟ್ಟಿ, ಚನ್ನಬಸಪ್ಪ ತಿಪ್ಪಣ್ಣವರ, ಶೇಖಪ್ಪ ದ್ಯಾವಪ್ಪನವರ, ಶರಣಪ್ಪ ಮಡಿವಾಳರ, ಬಸವರಾಜ ಹೊನ್ನಿಹಳ್ಳಿ, ಕಿರಣ ಪಾಟೀಲಕುಲಕರ್ಣಿ, ಮದನ ಕುಲಕರ್ಣಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts