ಕಲಬುರಗಿಯಲ್ಲಿ ಪಾರಂಪರಿಕ ವೈದ್ಯರ ಜಿಲ್ಲಾ ಸಮ್ಮೇಳನ ಅ.೧೦ ರಂದು

IMG-20230925-WA0023
Published on

ವೈದ್ಯ ಪರಿಷತ್ತಿನ ಅದ್ಯಕ್ಷ ಆನಂದ ಹೇಳಿಕೆ | ಕಲಬುರಗಿಯ ಭವಾನಿನಗರದ ಬಬಲಾದಿ ಮಠದಲ್ಲಿ  ಆಯೋಜನೆ

ವಿಜಯವಾಣಿ ಸುದ್ದಿಜಾಲ ಕಲಬುರಗಿ
ಭಾರತೀಯ ವೈದ್ಯ ಪದ್ಧತಿಯ ಮೂಲ ತಳಹದಿಯಾಗಿರುವ  ಪಾರಂಪರಿಕ (ನಾಟಿ) ವೈದ್ಯ ಪದ್ದತಿ ಉಳಿಸಿ ಬೆಳೆಸಲು ಪಾರಂಪರಿಕ ವೈದ್ಯರ ಸಮ್ಮೇಳನವನ್ನು ಕಲಬುರಗಿ ನಗರದ ರಿಂಗ್‌ರೋಡ್‌ನಲ್ಲಿರುವ ಕಾಕಡೆ ಚೌಕ್ ಸಮೀಪದ ಮುತ್ಯಾನಬಬಲಾದಿ ಮಠದಲ್ಲಿ  ಅ.೧೦ ರಂದು ಹಮ್ಮಿಕೊಳ್ಳಲಾಗಿದೆ.
ಎಲ್ಲ ರೋಗಗಳಿಗೆ ಪರಿಣಾಮಕಾರಿ ಚಿಕಿತ್ಸೆ ನೀಡುವ ನಾಟಿ ವೈದ್ಯ ಪದ್ಧತಿ ಕ್ರಮೇಣವಾಗಿ ನಶಿಸುತ್ತಿದೆ. ಹೀಗಾಗಿ ಇದನ್ನು ಮುಂದಿನ ಪೀಳಿಗೆಗೆ ತೆಗೆದುಕೊಂಡು ಹೋಗಲು ಸಮ್ಮೇಳನವನ್ನು ಆಯೋಜಿಸಲಾಗುತ್ತಿದೆ ಎಂದು ಕಲ್ಯಾಣ ಕರ್ನಾಟಕ ಪಾರಂಪರಿಕ ವೈದ್ಯ ಪರಿಷತ್ ಅಧ್ಯಕ್ಷ ಆನಂದ ಹೇರೂರ, ಪ್ರಧಾನ ಕಾರ್ಯದರ್ಶಿ ಕುಮಾರಸ್ವಾಮಿ ಕಸಬಾ ಲಿಂಗಸೂರು ಮತ್ತು ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಮೇಶ ಗಂಜಿ ಜಂಟಿಯಾಗಿ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜಿಲ್ಲಾ ಸಮ್ಮೇಳನ ಉದ್ಘಾಟನಾ ಸಮಾರಂಭದಲ್ಲಿ ಶಾಸಕರಾದ ಅಲ್ಲಮಪ್ರಭು ಪಾಟೀಲ್, ಬಸವರಾಜ ಮತ್ತಿಮಡು, ಕನ್ನೀಜ್ ಫಾತಿಮಾ ಅವರು ಪಾಲ್ಗೊಳ್ಳಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಆಹ್ವಾನಿಸಲಾಗಿದೆ. ಇನ್ನೂ  ಅವರು ದಿನಾಂಕ ಖಚಿತಪಡಿಸಿಲ್ಲ ಎಂದರು.
ಎಲ್ಲ ಜಿಲ್ಲೆಗಳಲ್ಲಿ ಸಮ್ಮೇಳನಗಳನ್ನು ನಡೆಸಿದ ಬಳಿಕ ರಾಜ್ಯಮಟ್ಟದ ಇಲ್ಲವೇ ಕಲ್ಯಾಣ ಕರ್ನಾಟಕ ಭಾಗದ ಏಳು ಜಿಲ್ಲೆಗಳ ನಾಟಿ ವೈದ್ಯರನ್ನು ಸೇರಿಸಿ ಸಮ್ಮೇಳನವನ್ನು ಮೂರು ದಿನಗಳ ಕಾಲ ಆಯೋಜಿಸುವ ಮೂಲಕ ಎಲ್ಲ ಪಾರಂಪರಿಕ ವೈದ್ಯರಿಗೆ  ಆರ್ಯುವೇದ ಕಾಲೇಜುಗಳ ನುರಿತ ವೈದ್ಯರಿಂದ ದೇಹರಚನಾ ಶಾಸ್ತç, ನಾಡಿ ಪರೀಕ್ಷೆ, ಔಷಧ ತಯಾರಿಕೆ ಇನ್ನಿತರ  ಕ್ರಮಗಳ ಕುರಿತು ತರಬೇತಿ ಕಾರ್ಯಾಗಾರಗಳನ್ನು ನಡೆಸಲಾಗುವುದು ಎಂದು ವೈದ್ಯ ಆನಂದ ವಿವರಿಸಿದರು.
ಮುಂದಿನ ದಿನಗಳಲ್ಲಿ ಸಂಘಟನೆಯನ್ನು ಬಲಗೊಳಿಸಿ, ಸರ್ಕಾರಿ ಸವಲತ್ತುಗಳನ್ನು ಪಡೆದುಕೊಳ್ಳುವುದು. ಪಾರಂಪರಿಕ ವೈದ್ಯರಿಗೆ ಮಾನ್ಯತೆ ನೀಡಬೇಕು ಎಂಬುದು ಸೇರಿದಂತೆ ಹಲವು ಸಮ್ಯೆಗಳ ಕುರಿತು ಸರ್ಕಾರದ ಗಮನ ಸೆಳೆಯಲಾಗುವುದು ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಹಿರಿಯ ನಾಟಿ ವೈದ್ಯರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net