ಶ್ರೇಷ್ಠ ನಾಟಕಕಾರ ಶಿವಪ್ರಕಾಶ್​ಗೆ ಒಲಿದ ಜೀವಮಾನದ ಸಾಧನೆ ಪ್ರಶಸ್ತಿ

Shivaprakash_Award
Published on

ವಿಶೇಷ ವರದಿ

ತುಮಕೂರು: ಕವಿ, ನಾಟಕಕಾರ, ವಿಮರ್ಶಕ, ಜೆಎನ್​ಯು ನಿವೃತ್ತ ಪ್ರಾಧ್ಯಾಪಕ ಡಾ. ಎಚ್​.ಎಸ್​.ಶಿವಪ್ರಕಾಶ್​ 2023ನೇ ಸಾಲಿನ ರಾಜ್ಯ ನಾಟಕ ಅಕಾಡೆಮಿಯ ಜೀವಮಾನದ ಸಾಧನೆಗೆ ಭಾಜನರಾಗಿದ್ದಾರೆ.

1954ರಲ್ಲಿ ತುಮಕೂರು ನಗರದ ಹೊರಪೇಟೆಯಲ್ಲಿ ಡಾ. ಪದ್ಮಶಿ ಶಿವಮೂರ್ತಿ ಶಾಸಿಗಳ ದ್ವೀತಿಯ ಪುತ್ರರಾಗಿ ಜನಿಸಿದ ಎಚ್​.ಎಸ್​.ಶಿವಪ್ರಕಾಶ್​ ಎಂ.ಎ., ಇಂಗ್ಲೀಷ್​ ಪದವಿ ಗಳಿಸಿ ತುಮಕೂರಿನ ಸರ್ಕಾರಿ ಪದವಿ ಕಾಲೇಜು ಸೇರಿ ರಾಜ್ಯದ ವಿವಿಧ ಕಾಲೇಜುಗಳಲ್ಲಿ ಆಂಗ್ಲಭಾಷಾ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದಾರೆ. ತದನಂತರ 2001ರಲ್ಲಿ ದೆಹಲಿಯ ಜವಹರಲಾಲ್​ ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ 2021ರಲ್ಲಿ ನಿವೃತ್ತರಾಗಿದ್ದಾರೆ.

ಕವಿ, ವಿಮರ್ಶಕ, ಶ್ರೇಷ್ಠ ನಾಟಕಕಾರರಾಗಿರುವ ಶಿವಪ್ರಕಾಶ್​, ಭಾರತೀಯ ಸಾಹಿತ್ಯ ದ್ವೆವಾರ್ಷಿಕ ಸಂಚಿಕೆ ಸಂಪಾದಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 2011 ರಿಂದ 2014ರವರೆಗೆ ಜರ್ಮನ್​ ದೇಶದ ಬರ್ಲಿನ್​ನಲ್ಲಿ ರವೀಂದ್ರನಾಥ ಠಾಗೂರ್​ ಸಾಂಸತಿಕ ಕೇಂದ್ರದ ನಿರ್ದೇಶಕರಾಗಿ ಸಹ ಸೇವೆ ಸಲ್ಲಿಸಿದ್ದಾರೆ.

ವಿವಾದ ಎಬ್ಬಿಸಿದ್ದ ಮಹಾಚೈತ್ರ !: ಹೆಚ್​.ಎಸ್​.ಶಿವಪ್ರಕಾಶ್​ ಮೊದಲ ಕವನ ಸಂಕಲನ "ಮಿಳರಿಪ' 1977ರಲ್ಲಿ ತಮ್ಮ 23ನೇ ವಯಸ್ಸಿನಲ್ಲಿ ಪ್ರಕಟಗೊಂಡಿದೆ. 1983ರಲ್ಲಿ ಮತ್ತೊಂದು ಕವನ ಸಂಕಲನ "ಮಳೆ ಬಿದ್ದ ನೆಲದಲ್ಲಿ' ಪ್ರಕಟಿಸಿದ್ದು ಎಚ್​.ಎಸ್​.ಶಿವಪ್ರಕಾಶ್​ರವರು 1986ರಲ್ಲಿ ಬಸವಣ್ಣನವರ ಕುರಿತು ರಚಿಸಿ ಪ್ರಕಟಿಸಿದ ಮಹಾಚೈತ್ರ ಸಾಕಷ್ಟು ವಿವಾದ ಎಬ್ಬಿಸಿತ್ತು.

ಒಟ್ಟು ಏಳು ಕವನ ಸಂಕಲಗಳು, 15 ನಾಟಕಗಳನ್ನು ಶಿವಪ್ರಕಾಶ್​ ರಚಿಸಿದ್ದಾರೆ. ಅವರ ಕೃತಿಗಳು ಇಂಗ್ಲೀಷ್​, ಫ್ರೆಂಚ್​, ಇಟ್ಯಾಲಿಯನ್​, ಜರ್ಮನಿ ಸೇರಿದಂತೆ ಹಿಂದಿ, ಮಲಯಾಳಂ, ಮಾಠಿ, ತಮಿಳು ಮತ್ತು ತೆಲುಗು ಭಾಷೆಗಳಿಗೂ ಅನುವಾದಗೊಂಡಿವೆ. ಕನ್ನಡ, ಹಿಂದಿ, ಅಸ್ಸಾಮಿ, ಬೋಡೋ, ತಮಿಳು ಮತ್ತು ಮಲೆಯಾಳಂ ಭಾಷೆಗಳಲ್ಲಿ ಅವರ ನಾಟಕಗಳು ಪ್ರದರ್ಶನಗೊಂಡಿವೆ.

ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸೇರಿ ನೂರಾರು ಪ್ರಶಸ್ತಿಗಳು ಎಚ್​.ಎಸ್​.ಶಿವಪ್ರಕಾಶ್​ಗೆ ಒಲಿದುಬಂದಿದ್ದು ಸದ್ಯ ಅವರು ಬೆಂಗಳೂರಿನಲ್ಲಿ ನೆಲೆಸಿದ್ದಾರೆ.

ಎಚ್​.ಎಸ್​.ಶಿವಪ್ರಕಾಶ್​ 15ಕ್ಕೂ ಹೆಚ್ಚು ನಾಟಕಗಳನ್ನು ರಚಿಸಿದ್ದಾರೆ. "ಮಹಾಚೈತ್ರ' "ಸುಲ್ತಾನ ಟಿಪ್ಪೂ', ಶೇಕ್ಸ್​ಪಿಯರ್​ನ ಸ್ವಪ್ನ ನೌಕೆ, ಸತಿ, ಕಸಾಂದ್ರಾ, ಮದುವೆಯಹೆಣ್ಣು, ಮಾಳವಿಕಾ ಮತ್ತು ನಟ್ಟಿರುಳಾಟ ನಟ್ಟಿರುಳಾಟಇನ್ನೊಂದು ಮ್ಯಾಕ್​ಬೆತ್​, ಜಾನಪದ ಸತ್ವದ ಮಂಟೇಸ್ವಾಮಿ ಕಥಾ ಪ್ರಸಂಗ, ಮಾದಾರಿ ಮಾದಯ್ಯ ಮುಂತಾದವು ಶಿವಪ್ರಕಾಶ್​ರ ಪ್ರಮುಖ ನಾಟಕಗಳು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net