

ವಿಜಯವಾಣಿ ಸುದ್ದಿಜಾಲ ಉಳ್ಳಾಲ
ನರಿಂಗಾನ ಗ್ರಾಮದ ಬೋಳ ಪದವಿನಲ್ಲಿ ನಡೆದ ಕಂಬಳದಲ್ಲಿ 265 ಜೊತೆ ಕೋಣಗಳು ಭಾಗವಹಿಸಿದ್ದವು.
ಕನೆಹಲಗೆಯಲ್ಲಿ 10, ಅಡ್ಡಹಲಗೆಯಲ್ಲಿ 10, ಹಗ್ಗ ಹಿರಿಯ 28, ನೇಗಿಲು ಹಿರಿಯ 28, ಹಗ್ಗ ಕಿರಿಯ 25, ನೇಗಿಲು ಕಿರಿಯ 60 ಹಾಗೂ ಸಬ್ ಜೂನಿಯರ್ ನೇಗಿಲು ವಿಭಾಗದಲ್ಲಿ 104 ಜೊತೆ ಕೋಣಗಳು ಭಾಗವಹಿಸಿದ್ದವು.
ಫಲಿತಾಂಶ: ಕನೆ ಹಲಗೆ: (6.5 ಕೋಲು ನಿಶಾನೆಗೆ ನೀರು ಹಾಯಿಸಿದವರು) ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ, ಹಲಗೆ ಮೆಟ್ಟಿದವರು ಬೈಂದೂರು ರಾಗಿಹಿತ್ಲು ರಾಘವೇಂದ್ರ. ಕಾಂತಾವರ ಬೇಲಾಡಿ ಬಾವ ಪ್ರಜೋತ್ ಶೆಟ್ಟಿ, ಹಲಗೆ ಮೆಟ್ಟಿದವರು: ತೆಕ್ಕಟ್ಟೆ ಸುಧೀರ್ ದೇವಾಡಿಗ.
ಅಡ್ಡ ಹಲಗೆ: ಪ್ರಥಮ: ನಾರಾವಿ ಯುವರಾಜ್ ಜೈನ್ ‘ಎ‘ (12.18), ಹಲಗೆ ಮೆಟ್ಟಿದವರು: ಭಟ್ಕಳ ಹರೀಶ್, ದ್ವಿತೀಯ: ಬೋಳಾರ ತ್ರಿಶಾಲ್ ಕೆ.ಪೂಜಾರಿ(12.45), ಹಲಗೆ ಮೆಟ್ಟಿದವರು: ಬೈಂದೂರು ಹೊಸಕೋಟೆ ಮಹೇಶ್ ಪೂಜಾರಿ.
ಹಗ್ಗ ಹಿರಿಯ ವಿಭಾಗ: ಪ್ರಥಮ: ವೇಣೂರು ಮುಡುಕೋಡಿ ಗಣೇಶ್ ನಾರಾಯಣ್ ಪಂಡಿತ್ ‘ಎ’(11.83). ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ, ದ್ವಿತೀಯ: ಕೊಳಕೆ ಇರ್ವತ್ತೂರು ಭಾಸ್ಕರ ಎಸ್.ಕೋಟ್ಯಾನ್ (11.89), ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕತಿಕ್ ಗೌಡ.
ಹಗ್ಗ ಕಿರಿಯ ವಿಭಾಗ: ಪ್ರಥಮ: ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ.ಶೆಟ್ಟಿ ‘ಎ’, ಓಡಿಸಿದವರು: ಭಟ್ಕಳ ಶಂಕರ್, ದ್ವಿತೀಯ: ಬೆಳುವಾಯಿ ಪೆರೋಡಿ ಪುತ್ತಿಗೆ ಗುತ್ತು ಕೌಶಿಕ್ ದಿನಕರ ಬಿ.ಶೆಟ್ಟಿ ‘ಬಿ’, ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ.
ನೇಗಿಲು ಹಿರಿಯ ವಿಭಾಗ: ಪ್ರಥಮ: ಬೋಳ್ಯಾರು ಪೊಯ್ಯೆ ನರ್ಮದ ಉಮೇಶ್ ಶೆಟ್ಟಿ (11.56), ಓಡಿಸಿದವರು: ಬಂಬ್ರಾಣಬೈಲು ವಂದಿತ್ ಶೆಟ್ಟಿ. ದ್ವಿತೀಯ: ಬಂಗಾಡಿ ಪರಂಬೇಲು ನಾರಾಯಣ ಮಲೆಕುಡಿಯ (11.87), ಓಡಿಸಿದವರು: ಕಕ್ಕೆಪದವು ಪೆಂರ್ಗಾಲು ಕೃತಿಕ್ ಗೌಡ.
ನೇಗಿಲು ಕಿರಿಯ ವಿಭಾಗ: ಪ್ರಥಮ: ಭಟ್ಕಳ ಎಚ್.ಎನ್.ನಿವಾಸ ಪಿನ್ನುಪಾಲ್ (12.07), ಓಡಿಸಿದವರು: ಸೂರಾಲು ಪ್ರದೀಪ್ ನಾಯ್ಕ. ದ್ವಿತೀಯ: ಮೂಡುಬಿದಿರೆ ನ್ಯೂ ಪಡಿವಾಳ್ಸ್ ಹಾರ್ದಿಕ್ ಹರ್ಷವರ್ಧನ ಪಡಿವಾಳ್ (12.13), ಓಡಿಸಿದವರು: ಒಂಟಿಕಟ್ಟೆ ರಿತೇಶ್.
ಸಬ್ ಜೂನಿಯರ್ ನೇಗಿಲು ವಿಭಾಗ: ಪ್ರಥಮ: ಶ್ರೀ ಸ್ವಾಮಿಧಾಮ ಹೊಳೆಕಟ್ಟು ಕುಂಭಾಶಿ (12.30), ಓಡಿಸಿದವರು: ಬೈಂದೂರು ಮಂಜುನಾಥ ಗೌಡ, ದ್ವಿತೀಯ: ಸಾಣೂರು ಸೇನರಬೆಟ್ಟು ಜಗದೀಶ್ ಪೂಜಾರಿ (12.82), ಓಡಿಸಿದವರು: ಭಟ್ಕಳ ಹರೀಶ್.