ಆದೂರು ಶ್ರೀ ಭಗವತಿ ದೈವಸ್ಥಾನದಲ್ಲಿ ಪೆರುಂಕಳಿಯಾಟ :ಮೂರೂವರೆ ಶತಮಾನದ ಬಳಿಕ ಉತ್ಸವ : 19ರಂದು ಚಾಲನೆ, 24ರಂದು ಸಂಪನ್ನ

Published on

ಕಾಸರಗೋಡು: ಶತಮಾನಗಳ ಪರಂಪರೆ ಹೊಂದಿರುವ ಆದೂರು ಶ್ರೀ ಭಗವತಿ ದೈವಸ್ಥಾನದಲ್ಲಿ ಮೂರೂವರೆ ಶತಮಾನಗಳ ನಂತರ ಇದೇ ಮೊದಲ ಬಾರಿಗೆ ಪೆರುಂಕಳಿಯಾಟ ಮಹೋತ್ಸವ ಜ.19ರಿಂದ 24ರವರೆಗೆ ಜರುಗಲಿದೆ. ತುಳುನಾಡಿನಲ್ಲಿ ನಡೆಯಲಿರುವ ಪೆರುಂಕಳಿಯಾಟಕ್ಕೆ ವಿಶೇಷತೆಯಿದ್ದು, ಸಾಮಾಜಿಕ ಬದ್ಧತೆ, ಪರಿಸರ ಸಂರಕ್ಷಣೆ ಬಗ್ಗೆ ಕಾಳಜಿ ಮೂಡಿಸುವುದರ ಜತೆಗೆ ಸಾವಯವ ಪದ್ಧತಿ ಮೂಲಕ ವಿಷರಹಿತ ಆಹಾರವಸ್ತು ತಯಾರಿಸುವ ಬಗ್ಗೆ ಜಾಗೃತಿ ಮೂಡಿಸುವ ಕೆಲಸವೂ ನಡೆಯುತ್ತಿದೆ ಎಂದು ಮಹೋತ್ಸವ ಸಮಿತಿ ಪದಾಧಿಕಾರಿ ಅನಿಲ್ ಕುಮಾರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕಳಿಯಾಟ ಮಹೋತ್ಸವದ ಪೂರ್ವಭಾವಿಯಾಗಿ ಜ.15ರಂದು ಕಾಸರಗೋಡು ನುಳ್ಳಿಪ್ಪಾಡಿಯಿಂದ ಮಲ್ಲಿಕಾರ್ಜುನ ದೇವಸ್ಥಾನದವರೆಗೆ ಮ್ಯಾರಥಾನ್ ಓಟ, 17ರಂದು ಶುದ್ಧಿಕಲಶ, ಉಗ್ರಾಣ ಮುಹೂರ್ತ, 18ರಂದು ಆಚಾರ್ಯ ಸಂಗಮ, ಮುಳ್ಳೇರಿಯ ಪೇಟೆ ಮೂಲಕ ಹಾದುಹೋಗುವ ಬೃಹತ್ ಡಂಗುರ ಮೆರವಣಿಗೆ ನಡೆಯುವುದು. ಬಳಿಕ 19ರಿಂದ 24ರವರೆಗೆ ಪೆರುಂಕಳಿಯಾಟ ನಡೆಯಲಿದೆ ಎಂದರು.

ಬಿಪಿನ್‌ದಾಸ್ ರೈ ಆದೂರುಗುತ್ತು, ಹರೀಶ್ಚಂದ್ರ ಆರ್.ಬೇರಿಕೆ, ದಾಮೋದರನ್ ಕಾವುಗೋಳಿ, ಮಾಧವನ್ ಭಂಡಾರವೀಡ್, ಕೃಷ್ಣಪ್ಪ ಕಾವುಗೋಳಿ, ಶಿವಪ್ರಸಾದ್ ರೈ, ದಿನೇಶ್ ಬಂಬ್ರಾಣ, ರಘುರಾಮ ರೈ ನಡುಮನೆ, ಪ್ರಕಾಶ್ ಭಂಡಾರಿ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net