ಸಂಸ್ಕೃತಿಯನ್ನು ದಾಟಿಸುವ ಕಾರ್ಯವಾಗಲಿ : ಪದ್ಮರಾಜ್ ಆರ್.ಪೂಜಾರಿ ಆಶಯ

kesar
ಕೆಸರ್ದ ಕಂಡೊಡು ಗೊಬ್ಬುದ ಕೂಟ ಕಾರ್ಯಕ್ರಮ ಸಮಾರೋಪದಲ್ಲಿ ಪದ್ಮರಾಜ್ ಆರ್.ಪೂಜಾರಿ ಮಾತನಾಡಿದರು. ಯಶೋಧರ ಕರ್ಬೆಟ್ಟು, ಬೇಬಿ ಕುಂದರ್, ರಘು ಸಫಲ್ಯ ಮೊದಲಾದವರಿದ್ದರು.
Published on

ಬಂಟ್ವಾಳ: ಕೆಸರು ಗದ್ದೆ ಕ್ರೀಡಾಕೂಟಗಳು ಕೇವಲ ಆಟಕ್ಕೆ ಸೀಮಿತವಾಗದೆ ನಮ್ಮ ಪೂರ್ವಿಕರ ಆಚಾರ-ವಿಚಾರ, ಸಂಸ್ಕೃತಿಗಳನ್ನು ಇಂದಿನ ಜನಾಂಗಕ್ಕೆ ನೆನಪಿಸಲು ಸಹಕಾರಿ ಎಂದು ಗುರು ಬೆಳದಿಂಗಳು ಫೌಂಡೇಷನ್ ಅಧ್ಯಕ್ಷ ಪದ್ಮರಾಜ್ ಆರ್.ಪೂಜಾರಿ ಹೇಳಿದರು.

ನಾಯಿಲ ನರಿಕೊಂಬು ಓಂ ಶ್ರೀ ಗೆಳೆಯರ ಬಳಗ ವತಿಯಿಂದ ನಡೆದ ಕೆಸರ್ದ ಕಂಡೊಡು ಗೊಬ್ಬುದ ಕೂಟ ಕಾರ್ಯಕ್ರಮದ ಸಮಾರೋಪದಲ್ಲಿ ಮಾತನಾಡಿದರು. ಬಿಜೆಪಿ ಬಂಟ್ವಾಳ ಹಿಂದುಳಿದ ವರ್ಗಗಳ ಮೋರ್ಚಾ ಅಧ್ಯಕ್ಷ ಯಶೋಧರ ಕರ್ಬೆಟ್ಟು ಅಧ್ಯಕ್ಷತೆ ವಹಿಸಿದ್ದರು.

ಬಂಟ್ವಾಳ ನಗರ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಬೇಬಿ ಕುಂದರ್, ಉದ್ಯಮಿ ರಘು ಸಫಲ್ಯ, ಪಿಡಬ್ಲುೃಡಿ ಗುತ್ತಿಗೆದಾರರ ಸಂಘದ ಬಂಟ್ವಾಳ ತಾಲೂಕು ಅಧ್ಯಕ್ಷ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಉಮೇಶ್ ನೆಲ್ಲಿಗುಡ್ಡೆ, ಚರಣ್ ಕುಮಾರ್, ದಕ್ಷಿಣ ಕನ್ನಡ ಫ್ಲವರ್ ಡೆಕೋರೇಷನ್ ಮಾಲೀಕರ ಅಸೋಸಿಯೇಷನ್ ಉಪಾಧ್ಯಕ್ಷ ಅನಿಲ್ ಕೊಟ್ಟಾರಿ, ಉದ್ಯಮಿ ಚೇತನ್ ಮೆಲ್ಕಾರ್, ಬಿಜೆಪಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಪುರುಷೋತ್ತಮ ಸಾಲಿಯಾನ್, ಡಾ.ಸುಬ್ರಹ್ಮಣ್ಯ ಮೊಗರ್ನಾಡು, ಪ್ರಸಾದ್ ಮರ್ದೋಳಿ, ಮಹಿಳಾ ಸಂಚಾಲಕಿ ನಳಿನಿ ಉಮೇಶ್, ಗೌರವ ಸಂಚಾಲಕಿ ಕಾವ್ಯಶ್ರೀ ನೆಲ್ಲಿಗುಡ್ಡೆ ಮೊದಲಾದವರು ಉಪಸ್ಥಿತರಿದ್ದರು.

ಕೆಸರುಗದ್ದೆಯಲ್ಲಿ ನಡೆದ ವಿವಿಧ ಕ್ರೀಡಾಕೂಟಗಳಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಗೆಳೆಯರ ಬಳಗ ಅಧ್ಯಕ್ಷ ಕಿರಣ್ ಅಟ್ಲುರು ಸ್ವಾಗತಿಸಿದರು. ಸತೀಶ್ ಹೊಸ್ಮಾರು ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net