

ಬಂಟ್ವಾಳ: ನಾರಾಯಣಗುರುಗಳ ತತ್ವಗಳು ಮತ್ತು ಚಟುವಟಿಕೆಗಳು ಮಹಿಳೆಯರ ಸ್ವಾತಂತ್ರೃ, ಶಿಕ್ಷಣ, ಮತ್ತು ಸಾಮಾಜಿಕ ಸಮಾನತೆಗೆ ಪ್ರೇರಣೆ ನೀಡಿವೆ. ಮಹಿಳೆಯರು ಶಿಕ್ಷಣ ಪಡೆದು ಸ್ವಾವಲಂಬಿಯಾಗಿ ಬದುಕಬೇಕು. ಮಹಿಳಾ ಸಬಲೀಕರಣಕ್ಕೆ ನಾರಾಯಣಗುರುಗಳ ಕೊಡುಗೆ ಅವಿಸ್ಮರಣೀಯ ಎಂದು ಯುವವಾಹಿನಿ ಬಂಟ್ವಾಳ ಘಟಕ ಮಾಜಿ ಅಧ್ಯಕ್ಷ ಪ್ರೇಮನಾಥ್ ಕೆ. ತಿಳಿಸಿದರು.
ಬಂಟ್ವಾಳ ಯುವವಾಹಿನಿ ಘಟಕದ ಸದಸ್ಯ ಸೂರಜ್ ತುಂಬೆ ಅವರ ಮನೆಯಲ್ಲಿ ನಡೆದ ಗುರುತತ್ವವಾಹಿನಿ 34ನೇ ಕಾರ್ಯಕ್ರಮದಲ್ಲಿ ಮಾತನಾಡಿದರು.
ಯುವವಾಹಿನಿ ಬಂಟ್ವಾಳ ಘಟಕ ಉಪಾಧ್ಯಕ್ಷ ನಾರಾಯಣ ಪಲ್ಲಿಕಂಡ, ನಿರ್ದೇಶಕ ಮಹೇಶ್ ಬೊಳ್ಳಾಯಿ, ಮಾಜಿ ಅಧ್ಯಕ್ಷ ನಾಗೇಶ್ ಪೊನ್ನೋಡಿ, ಅರುಣ್ ಕುಮಾರ್, ಶಿವಾನಂದ ಎಂ, ಸದಸ್ಯರಾದ ಪ್ರಶಾಂತ್ ಏರಮಲೆ, ಅಮಿತ ಉಮೇಶ್, ಯತೀಶ್ ಬೊಳ್ಳಾಯಿ, ಸುದೀಪ್ ಸಾಲ್ಯಾನ್ ರಾಯಿ, ನಾಗೇಶ್ ಏಲಬೆ ಮತ್ತಿತರರು ಉಪಸ್ಥಿತರಿದ್ದರು. ನಾರಾಯಣ ಗುರುತತ್ವ ಪ್ರಚಾರ ಅನುಷ್ಠಾನ ನಿರ್ದೇಶಕ ಪ್ರಜಿತ್ ಅಮೀನ್ ಏರಮಲೆ ಸ್ವಾಗತಿಸಿ, ವಂದಿಸಿದರು.