

ಕೊಕ್ಕಡ: ಪಟ್ಲಡ್ಕ ಶ್ರೀ ಗಡಿಯಾಡಿ ಆದಿಮೊಗೆರ್ಕಳ ಸ್ವಾಮಿ ಕೊರಗಜ್ಜ ದೈವಸ್ಥಾನದಲ್ಲಿ ನಡೆದ ನೇಮೋತ್ಸವ ಸಂದರ್ಭದಲ್ಲಿ ಕ್ಷೇತ್ರದ ಬಗ್ಗೆ ಸ್ತುತಿಸುವ ಧ್ವನಿಸುರುಳಿ ಪಟ್ಲಡ್ಕ ಸಿರಿ ಬಿಡುಗಡೆಗೊಂಡಿತು.
ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ತುಕ್ರಪ್ಪ ಶೆಟ್ಟಿ ನೂಜೆ, ಕೃಷಿ ಪತ್ತಿನ ಸಹಕಾರಿ ಸಂಫದ ಅಧ್ಯಕ್ಷ ಬಾಲಕೃಷ್ಣ ಬಾಣಜಾಲ್, ಬಿಜೆಪಿ ಮುಖಂಡ ಬಾಲಕೃಷ್ಣ ಬೋರ್ಕರ್, ರವಿಪ್ರಸಾದ್ ಶೆಟ್ಟಿ, ದೀಕ್ಷಾ ಚಂದನ್, ಪ್ರಕಾಶ್ ರೈ, ಕಿರಣ್, ರುಕ್ಮಯ ಮಡಿವಾಳ, ಹರೀಶ್ ಪಿ ಉಪಸ್ಥಿತರಿದ್ದರು. ಸಾಹಿತ್ಯ ಗಣೇಶ್ ಆಚಾರ್ಯ ಜಾಲ್ಮನೆ ಗಾಯನ, ಶಂಕರ್ ನೆಲ್ಯಾಡಿ ಸಾಹಿತ್ಯ ಒದಗಿಸಿದ್ದಾರೆ.