

ಉಳ್ಳಾಲ: ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಗ್ರಾಮಚಾವಡಿ ಕೊಣಾಜೆ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮದಿನೋತ್ಸವ ಸೆ.7ರಂದು ನಡೆಯಲಿದೆ ಎಂದು ಸಂಘದ ಅಧ್ಯಕ್ಷ ವಿಜೇತ್ ಪಜೀರು ತಿಳಿಸಿದರು.
ಗ್ರಾಮಚಾವಡಿಯ ಬ್ರಹ್ಮಶ್ರೀ ನಾರಾಯಣ ಗುರು ಸಮುದಾಯ ಭವನದಲ್ಲಿ ಗುರುವಾರ ಆಮಂತ್ರಣ ಪತ್ರಿಕೆ ಬಿಡುಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಅರ್ಚಕ ಜನಾರ್ದನ ಪೂಜಾರಿ, ಸಂಘದ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ್ ಪಾವೂರು, ಕೋಶಾಧಿಕಾರಿ ದಿನೇಶ್ ತಾರಿಪಾಡಿ, ಜತೆ ಕಾರ್ಯದರ್ಶಿ ಸುಜಾತಾ ಹರೇಕಳ, ಮಹಿಳಾ ಘಟಕದ ಅಧ್ಯಕ್ಷೆ ಬಬಿತಾ ಯಾದವ ಪೂಜಾರಿ ಬಾನಬೆಟ್ಟು, ಮಾಜಿ ಅಧ್ಯಕ್ಷರಾದ ರವೀಂದ್ರ ಬಂಗೇರ ಕೊಣಾಜೆ, ಗಂಗಾಧರ ಮಾಸ್ಟರ್ ಪಜೀರು, ಯುವವಾಹಿನಿ ಅಧ್ಯಕ್ಷ ಬಾಬು ಬಂಗೇರ ಉಪಸ್ಥಿತರಿದ್ದರು.