ವಿರಾಜಪೇಟೆ: ವಿರಾಜಪೇಟೆ ಬಿಲ್ಲವ ಸೇವಾ ಸಂಘದ ವತಿಯಿಂದ ಸೆ.7ರಂದು ಶ್ರೀ ನಾರಾಯಣಗುರುಗಳ 171ನೇ ಜಯಂತಿಯನ್ನು ಬಿಟ್ಟಂಗಾಲದ ಶ್ರೀ ನಾರಾಯಣಗುರು ಮಂದಿರದಲ್ಲಿ ಆಚರಿಸಲಾಗುವುದು ಎಂದು ವಿರಾಜಪೇಟೆ ತಾಲೂಕು ಬಿಲ್ಲವ ಸೇವಾ ಸಮಾಜದ ಅಧ್ಯಕ್ಷ ಬಿ.ಎಂ ಗಣೇಶ್ ಹೇಳಿದರು.
ನಾರಾಯಣಗುರುಗಳ ಜಯಂತಿಯ ಅಂಗವಾಗಿ ಬಿಲ್ಲವ ಸೇವಾ ಸಮಾಜದ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿಯಲ್ಲಿ ಶೇ.80ಕ್ಕಿಂತ ಹೆಚ್ಚಿನ ಅಂಕ ಪಡೆದ ಸದಸ್ಯರ ಮಕ್ಕಳಿಗೆ ಪ್ರತಿಭಾ ಪುರಸ್ಕಾರವನ್ನು ನೀಡಲಾಗುವುದು. ಪ್ರತಿಭಾ ಪುರಸ್ಕಾರವನ್ನು ಪಡೆಯಲು ಅರ್ಹರಾದ ವಿದ್ಯಾರ್ಥಿಗಳು ಅಂಕಪಟ್ಟಿ, ಆಧಾರ್ ಕಾರ್ಡ್ ಮತ್ತು ಭಾವಚಿತ್ರ ಹಾಗೂ ದೂರವಾಣಿ ಸಂಖ್ಯೆಯನ್ನು ಆ.30ರೊಳಗೆ ಸಲ್ಲಿಸಬೇಕು ಎಂದು ಗುರುವಾರ ಸುದ್ದಿಗೋಷ್ಠಿ ತಿಳಿಸಿದರು.
ವಿರಾಜಪೇಟೆ ಬಿಲ್ಲವ ಸೇವಾ ಸಂಘದ ವತಿಯಿಂದ ಈಗಾಗಲೇ ಮರಣ ನಿಧಿ ಚಾಲ್ತಿಯಲ್ಲಿದ್ದು, ಪ್ರತಿವರ್ಷ ನವೀಕರಣ ಕಡ್ಡಾಯವಾಗಿದ್ದು, ಸೆ.7 ಕೊನೆಯ ದಿನವಾಗಿದೆ. ತದನಂತರಲ್ಲಿ ನವೀಕರಿಸದೆ ಉಳಿದ ಸದಸ್ಯರ ಮರಣನಿಧಿ ರದ್ದುಗೊಳ್ಳಲಿದೆ ಎಂದು ಹೇಳಿದರು.
ಸದಸ್ಯರಾದ ಬಿ.ಎನ್ ಕಿಶೋರ್, ಬಿ.ಎಲ್ ಹರೀಶ್, ಬಿ.ಎ ಸುರೇಶ್ ಉಪಸ್ಥಿತರಿದ್ದರು.