ನಾರಾಯಣ ಗುರು ವಿಶ್ವ ಮಾನವತಾವಾದಿ

bmr (2)
Published on

ಬ್ರಹ್ಮಾವರ: ಬ್ರಹ್ಮಶ್ರೀ ನಾರಾಯಣ ಗುರುಗಳು ದುರ್ಬಲರಿಗೆ ಧ್ವನಿಯಾಗಿ ಶಿಕ್ಷಣ, ಸ್ವಾಭಿಮಾನ ಸ್ವಾವಲಂಬನೆಗೆ ಶಕ್ತಿ ತುಂಬಿ ಅಸ್ಪಷ್ಟತೆ ಹೋಗಲಾಡಿಸಿ ಸಮಾನತೆಗೆ ಶ್ರಮಿಸಿದ ವಿಶ್ವ ಮಾನವತಾವಾದಿ ಎಂದು ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ ಹೇಳಿದರು.

ಬ್ರಹ್ಮಾವರ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 171ನೇ ಜನ್ಮ ದಿನಾಚರಣೆ ಅಂಗವಾಗಿ ಭಾನುವಾರ ಜರುಗಿದ ಪ್ರತಿಭಾ ಪುರಸ್ಕಾರ, ವಿದ್ಯಾರ್ಥಿವೇತನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಎಸ್‌ಎಸ್‌ಎಲ್‌ಸಿ, ಪಿಯುಸಿ, ಪದವಿ, ಸ್ನಾತಕೋತ್ತರ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ನಾನಾ ಸರ್ಧೆ ವಿಜೇತರು, ಭರತನಾಟ್ಯದಲ್ಲಿ ದಾಖಲೆ ಮಾಡಿದ ವಿಧುಷಿ ದೀಕ್ಷಾ ವಿ. ಅವರನ್ನು ಸನ್ಮಾನಿಸಲಾಯಿತು. ಸಂಘ ಅಧ್ಯಕ್ಷ ಬಿ.ಎನ್.ಶಂಕರ ಪೂಜಾರಿ ಅಧ್ಯಕ್ಷತೆ ವಹಿಸಿದ್ದರು. ಹೈಕೋರ್ಟ್ ವಕೀಲ ಜಯಂತ ಪೂಜಾರಿ ಹಾರಾಡಿ, ಉಡುಪಿ ಜಿಲ್ಲಾ ಯುವ ವೇದಿಕೆ ಅಧ್ಯಕ್ಷ ಪ್ರವೀಣ್ ಪೂಜಾರಿ, ಉದ್ಯಮಿ ದೇವದಾಸ್ ಸುವರ್ಣ ಗರಡಿ ಮಜಲು, ಸಂಘದ ಪದಾಧಿಕಾರಿಗಳು, ನಾರಾಯಣ ಗುರು ಮಹಿಳಾ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net