ವಿವಿಧ ಕ್ಷೇತ್ರಗಳ ಸಾಧಕರಿಗೆ ಸನ್ಮಾನ

hbr (4)
Published on

ಹೆಬ್ರಿ: ಮುನಿಯಾಲು ವಾತಿಬೆಟ್ಟು ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂ ವತಿಯಿಂದ ನಾರಾಯಣಗುರು ನಗರದಲ್ಲಿರುವ ಸಮುದಾಯ ಭವನದಲ್ಲಿ ಶ್ರೀ ಗುರುನಾರಾಯಣ ಸ್ವಾಮಿಗಳ ಜನ್ಮದಿನೋತ್ಸವ, ಗುರುಪೂಜೆ, ಭಜನೆ, ಧಾರ್ಮಿಕ ಸಭೆ ಮತ್ತು ವಿವಿಧ ಕ್ಷೇತ್ರಗಳ ಸಾಧಕರ ಸನ್ಮಾನ ಭಾನುವಾರ ನಡೆಯಿತು.

ಕಾರ್ಕಳ ಶಾಸಕ ಸುನೀಲ್ ಕುವಾರ್ ವಾತನಾಡಿದರು. ಸೇವಾ ಸಂದ ಅಧ್ಯಕ್ಷ ಟಿ. ಮಂಜುನಾಥ್ ಅಧ್ಯಕ್ಷತೆ ವಹಿಸಿದ್ದರು. ಜಾನಪದ ಚಿಂತಕ ಅಗತ್ತಾಡಿ ದೋಲ ಬಾರಿಕೆಯ ಶೈಲು ಬಿರ್ವ ನಾರಾಯಣ ಗುರುಗಳ ಸಂದೇಶ, ತುಳುನಾಡಿನ ತತ್ವಗಳ ವಾಹಿತಿ ನೀಡಿದರು. ಪ್ರತಿಭಾವಂತ ವಿದ್ಯಾರ್ಥಿಗಳಿ ವಿದ್ಯಾರ್ಥಿ ವೇತನ ವಿತರಿಸಲಾಯಿತು.

ವಿವಿಧ ಕ್ಷೇತ್ರಗಳ ಸಾಧಕರಾದ ಗೋಪಾಲ ಕುಲಾಲ್ ಪಿತ್ತುಲ್ ಗುಂಡಿ-ಪ್ರಗತಿಪರ ಕಷಿಕ, ಬೊಗ್ರ ಮೇರ-ನಾಟಿ ವೈದ್ಯ, ಸದಾಶಿವ ಸೇರಿಗಾರ್-ಸ್ಯಾಕೋ್ಸೆೆನ್, ಡಾ. ರೋಶನ್ ಆರ್ ಕುಕ್ಕುಜೆ- ಆಯುರ್ವೇದ ವೈದ್ಯ, ರಂಜಿತಾ ಪೂಜಾರಿ, ನಂದಿನಿ ಪ್ರಕಾಶ ಪೂಜಾರಿ-ಶಿಕ್ಷಣ, ವಕೀಲ ಸುಮೀತ್ ಪೂಜಾರಿ-ವಕೀಲ, ಶರಣ್ಯ ಸತೀಶ ಪೂಜಾರಿ, ಸನ್ವಿತ್ ಎಸ್ ಪೂಜಾರಿ-ಕರಾಟೆ, ಚಿನ್ಮಯ್ ಪೂಜಾರಿ-ಚೆಸ್, ವರ್ಷಿಣಿ-ಬಿಪಿಎಡ್, ಆಪ್ತಿ ಆಚಾರ್ಯ-ಜಿವ್ನಾಸ್ಟಿಕ್, ಜಿಲ್ಲಾಪ್ರಶಸ್ತಿ ಪುರಸ್ಕೃತ ಪಡುಕುಡೂರು ಶಾಲೆ ಮುಖ್ಯಶಿಕ್ಷಕ ಹರೀಶ ಪೂಜಾರಿ.ಎಸ್ ಅವರನ್ನು ಸನ್ಮಾನಿಸಲಾಯಿತು.

ವರಂಗ ಗ್ರಾಪಂ ಅಧ್ಯಕ್ಷ ಸಂತೋಷ್ ಆಮೀನ್, ವಿಠ್ಠಲ ಪೂಜಾರಿ, ಪೆರ್ವಾಜೆ ಶ್ರೀ ಮಹಾಲೀಂಗೇಶ್ವರ ದೇವಸ್ಥಾನ ಆಡಳಿತ ಮೋಕ್ತೇಸರ ಕೆ.ಪ್ರಭಾಕರ ಬಂಗೇರ, ಪ್ರಮುಖರಾದ ರತ್ನಾಕರ ಆಮೀನ್, ಮಮತಾ ಅಂಚನ್, ಅಣ್ಣಯ್ಯ ಜಿ ಪೂಜಾರಿ, ದೇಜು ಡಿ ಪೂಜಾರಿ, ಸಂತೋಷ್ ಜಾರಣಿಗೆ, ಪ್ರಮಲ್ ಕುವಾರ್, ಎಸ್.ಟಿ.ಕುಂದರ್, ಎಂ.ಆನಂದ ಪೂಜಾರಿ, ಕೆ. ಮಂಜುನಾಥ್, ಹರೀಶ ಪೂಜಾರಿ, ರತ್ನಾಕರ ಪೂಜಾರಿ, ರಾಜು ಪೂಜಾರಿ, ಜ್ಯೋತಿ ಹರೀಶ್, ರೇಖಾ ಸತೀಶ್, ಸತೀಶ ಪೂಜಾರಿ, ನವೀನ್ ಪೂಜಾರಿ,ವಿವಿಧ ಪದಾಧಿಕಾರಿಗಳು ಉಪಸ್ಥಿತರಿದ್ದರು. ಆನಂದ ಪೂಜಾರಿ ಪ್ರಾಸ್ತಾವಿಸಿದರು. ರತ್ನಾಕರ ಪೂಜಾರಿ ಸ್ವಾಗತಿಸಿ, ಹರೀಶ ಪೂಜಾರಿ ವಂದಿಸಿದರು. ಶಿಕ್ಷಕ ಪ್ರಕಾಶ ಪೂಜಾರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net