ನಾರಂಪಾಡಿ ದೇವಳ ಜಾತ್ರೆಗೆ ಧ್ವಜಾರೋಹಣ

New Project (6)
Published on

ಬದಿಯಡ್ಕ: ನಾರಂಪಾಡಿ ಶ್ರೀ ಉಮಾಮಹೇಶ್ವರ ಕ್ಷೇತ್ರದಲ್ಲಿ ನವೀಕರಣ ಪುನಃ ಅಷ್ಟಬಂಧ ಬ್ರಹ್ಮಕಲಶಾಭಿಷೇಕದ ಬಳಿಕ ವರ್ಷಾವಧಿ ಜಾತ್ರೆಗೆ ಮಂಗಳವಾರ ಧ್ವಜಾರೋಹಣಗೊಂಡಿತ್ತು.

ಇದರ ಅಂಗವಾಗಿ ಬೆಳಗ್ಗೆ ಶ್ರೀ ಕ್ಷೇತ್ರದಲ್ಲಿ ಗಣಪತಿ ಹವನ, ಧ್ವಜಾರೋಹಣ, ಶ್ರೀಬಲಿ, ನವಕಾಭಿಷೇಕ ನಡೆಯಿತು. ಆರಂಭದಲ್ಲಿ ನಾರಂಪಾಡಿ ಶ್ರೀ ಉಮಾಮಹೇಶ್ವರ ಭಜನಾ ಸಮಿತಿಯಿಂದ ಭಜನೆ, ಜಿ.ಕೆ.ನಾವಡರ ಸಾರಥ್ಯದಲ್ಲಿ ಶಿವಭಕ್ತ ವೀರಮಣಿ ಯಕ್ಷಗಾನ ತಾಳಮದ್ದಳೆ ನಡೆಯಿತು. ಬಳಿಕ ತುಲಾಭಾರ ಸೇವೆ, ಮಧ್ಯಾಹ್ನ ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ ನಡೆಯಿತು. ಅಪರಾಹ್ನ ಗಿರೀಶ್ ಉಪ್ಪಿನಂಗಡಿ ಅವರಿಂದ ನಟವರ್ ಭಕ್ತಿ ಸಂಗೀತ್, ಯಕ್ಷವಿವಾಹರಿ ಬದಿಯಡ್ಕ ಅವರಿಂದ ಯಕ್ಷಗಾನ ತಾಳಮದ್ದಳೆ, ಶಿವಾಂಜಲಿ ಕಲಾಕೇಂದ್ರ ಪೆರ್ಲದ ವಿದುಷಿ ಕಾವ್ಯ ಭಟ್ ಅವರಿಂದ ಭರತನಾಟ್ಯ, ಶ್ರೀ ಶೈಲಂ ನಾರಂಪಾಡಿ ಅವರಿಂದ ಕರಗಾಟ್ಟಂ ನೃತ್ಯ, ರಾತ್ರಿ ಪೂಜೆ, ಹವಿಸ್ಸು ಪೂಜೆ, ಶ್ರೀ ಭೂತಬಲಿ ನಡೆಯಿತು.

ಬುಧವಾರ ಶ್ರೀ ಕ್ಷೇತ್ರದಲ್ಲಿ ಬೆಳಗ್ಗೆ ಶ್ರೀ ಬಲಿ, ಭಜನೆ, ಸುನಾದ ಸಂಗೀತ ಶಾಲೆ ಪುತ್ತೂರು, ಸುಬ್ರಹ್ಮಣ್ಯ ಕಬೆಕೋಡು ಅವರಿಂದ ಪಿಟೀಲು ವಾದನ, ತುಲಾಭಾರ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಅನ್ನದಾನ, ಅಪರಾಹ್ನ ಭರತನಾಟ್ಯ, ಶಾಸ್ತ್ರೀಯ ಸಂಗೀತ, ಸಂಜೆ ಭಜನೆ, ರಾತ್ರಿ ಪೂಜೆ, ಹವಿಸ್ಸು ಪೂಜೆ, ಶ್ರೀ ಭೂತಬಲಿ ನಡೆಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net