

ನಾಪೋಕ್ಲು: ಸತತ ಮಳೆಯಿಂದ ನಾಪೋಕ್ಕು-ಬೆಟ್ಟಗೇರಿ ಸಂಪರ್ಕ ರಸ್ತೆ ಕುಸಿಯುವ ಮಟ್ಟ ತಲುಪಿದ್ದು, ವಾಹನ ಸಂಪರ್ಕ ಕಡಿತಗೊಳ್ಳುವ ಸಾಧ್ಯತೆ ಇದೆ.
ನಾಪೋಕ್ಲು- ಬೆಟಗೇರಿ ಮಡಿಕೇರಿ ಮುಖ್ಯ ಸಂಪರ್ಕ ರಸ್ತೆಯ ಕೊಟ್ಟಮುಡಿ ಜಂಕ್ಷನ್ ಸಮೀಪ ರಸ್ತೆಯ ಒಂದು ಭಾಗ ಕುಸಿದಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಕಿರಿದಾದ ರಸ್ತೆಯ ಒಂದೇ ಭಾಗದಲ್ಲಿ ವಾಹನಗಳು ಸಂಚರಿಸುತ್ತಿದ್ದು, ಯಾವುದೇ ಕ್ಷಣದಲ್ಲಿ ಅವಘಡವಾಗುವ ಸಾಧ್ಯತೆ ಹೆಚ್ಚಾಗಿದೆ. ಕಳೆದ ವರ್ಷ ಈ ರಸ್ತೆ ಕಾವೇರಿ ಪ್ರವಾಹದಿಂದ ಮುಳುಗಡೆಯಾಗಿತ್ತು. ಈ ಬಾರಿಯೂ ಮಳೆಗಾಲದಲ್ಲಿ ಮುಳುಗಡೆಯಾದರೆ ರಸ್ತೆ ಸಂಪೂರ್ಣ ಕುಸಿದು ಭಾರಿ ಅನಾಹುತವಾಗುವ ಸಾಧ್ಯತೆ ಇದ್ದು, ಕೂಡಲೇ ಸಂಬಂಧಪಟ್ಟ ಇಲಾಖೆಯವರು ಗಮನಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.