

ಶಿರಸಿ: ಗ್ರಾಹಕರಲ್ಲಿ ನಂದಿನಿ ಉತ್ಪನ್ನಗಳ ಕುರಿತು ಅರಿವು ಮೂಡಿಸುವ ಅಂಗವಾಗಿ ಧಾರವಾಡ ಹಾಲು ಒಕ್ಕೂಟದ ವ್ಯಾಪ್ತಿಯಲ್ಲಿ ನಂದಿನಿ ಸಿಹಿ ಉತ್ಸವ ಡಿ.24ರಿಂದ ಆರಂಭಗೊಂಡಿದೆ.
ಗುರುವಾರ ನಗರದಲ್ಲಿ ಒಕ್ಕೂಟದ ನಿರ್ದೇಶಕ ಸುರೇಶ್ಚಂದ್ರ ಹೆಗಡೆ ಕೆಶಿನ್ಮನೆ ಅವರು ಉತ್ಸವಕ್ಕೆ ಚಾಲನೆ ನೀಡಿ ಮಾತನಾಡಿ, ಜ.7ರವರೆಗೆ ನಡೆಯಲಿರುವ ಉತ್ಸವದಲ್ಲಿ ಶೇ.10ರ ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ನಂದಿನಿ ಉತ್ಪನ್ನಗಳನ್ನು ಎಲ್ಲ ನಂದಿನಿ ಮಳಿಗೆಗಳಲ್ಲಿ ಮಾರಾಟ ಮಾಡಲಾಗುತ್ತಿದೆ ಎಂದರು.
ಈ ವೇಳೆ ಮಾರುಕಟ್ಟೆ ಅಧಿಕಾರಿಗಳಾದ ಶರಣು ಮೆಣಸಿನಕಾಯಿ ಮತ್ತು ಬಸವರಾಜ ಸಲೊನೆ, ನಂದಿನಿ ಡೀಲರ್ಗಳು ಮುಂತಾದವರು ಉಪಸ್ಥಿತರಿದ್ದರು.