

ವಿಜಯಪುರ: ಪ್ರಪಂಚ ವಿಸ್ಮಯಗಳ ಆಗರ. ಇಲ್ಲಿ ಆಶ್ಚರ್ಯ, ವಿಸ್ಮಯ, ಪವಾಡದಂಥ ಚಕಿತಗಳು ನಡೆಯುತ್ತಲೇ ಇರುತ್ತವೆ. ಇಂಥ ವಿಸ್ಮಯಗಳೇ ಜನರಲ್ಲಿ ದೇವರ ಮೇಲಿನ ನಂಬಿಕೆ ಹೆಚ್ಚಿಸುವುದು. ಇದೀಗ ಕರ್ನಾಟಕದ ವಿಜಯಪುರ ಜಿಲ್ಲೆಯಲ್ಲೂ ಸಹ ಇದೇ ರೀತಿಯ ಪವಾಡ ಒಂದು ನಡೆದಿದೆ.
ಕಲ್ಲಿನ ನಂದಿ ಮೂರ್ತಿಯು ನೀರು ಕುಡಿಯುತ್ತಿರುವ ಪವಾಡವೊಂದು ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬೋರಗಿ ಗ್ರಾಮದಲ್ಲಿ ಪವಾಡವನ್ನು ಕಣ್ತುಂಬಿಕೊಳ್ಳಲು ಭಕ್ತರ ದಂಡೆ ಹರಿದು ಬರುತ್ತಿದೆ. ಇದು ವಿಸ್ಮಯವೋ, ಪವಾಡವೋ ಗೊತ್ತಿಲ್ಲ. ಆದರೆ ಮೂರ್ತಿ ನೀರು ಕುಡಿದಿದ್ದು ಪಕ್ಕಾ ಎನ್ನುತ್ತಿದ್ದಾರೆ ಗ್ರಾಮಸ್ಥರು.
ವಿಜಯಪುರ ಜಿಲ್ಲೆಯ ಸಿಂದಗಿ ತಾಲ್ಲೂಕಿನ ಬೋರಗಿ ಗ್ರಾಮದ ಶ್ರೀ ಗೊಲ್ಲಾಳೇಶ್ವರ ದೇವಸ್ಥಾನದಲ್ಲಿರುವ ನಂದಿ ವಿಗ್ರಹಕ್ಕೆ ಸ್ಥಳೀಯರು ನೀರು ಕುಡಿಸುತ್ತಿರುವ ವಿಡಿಯೋ ವೈರಲ್. ಇದನ್ನು ಕಂಡು ಸ್ಥಳೀಯರು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ.
ಇದನ್ನೂ ಓದಿ: ಜಪಾನ್ ಓಪನ್ 2023; ಭಾರತದ ಲಕ್ಷ್ಯ ಸೇನ್ಗೆ ಸೋಲು