ಜಪಾನ್​ ಓಪನ್​ 2023; ಭಾರತದ ಲಕ್ಷ್ಯ ಸೇನ್​ಗೆ ಸೋಲು

lakshya sen
Published on

ಟೋಕಿಯೋ: ಜಪಾನ್​ ಓಪನ್​ 2023 ಬ್ಯಾಡ್ಮಿಂಟನ್​ ಟೂರ್ನಿ ಸೆಮಿಫಿನಾಲೆಯಲ್ಲಿ ಭಾರತದ ಲಕ್ಷ್ಯ ಸೇನ್​ ಮುಗ್ಗರಿಸಿದ್ದಾರೆ. ಶನಿವಾರ ನಡೆದ ಪುರುಷರ್​ ಸಿಂಗಲ್ಸ್​ನಲ್ಲಿ ಇಂಡೋನೇಷ್ಯಾದ ಜೋನಾಥನ್​ ಕ್ರಿಸ್ಟಿ ವಿರುದ್ಧ ಸೋಲು ಕಂಡಿದ್ದಾರೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್​ ವಿಭಾಗದ ಅಂತಿಮ ನಾಲ್ಕರ ಪೈಪೋಟಿಯಲ್ಲಿ ಭಾರತದ ಲಕ್ಷ್ಯ ಸೇನ್ ಇಂಡೋನೇಷ್ಯಾದ ಜೋನಾಥನ್​ ಕ್ರಿಸ್ಟಿ ವಿರುದ್ಧ 15-21, 21-13, 16-21ರ ಅಂತರದಲ್ಲಿ ಸೋಲನ್ನು ಅನುಭವಿಸಿದ್ದಾರೆ.

ಮೊದಲ ಸೆಟ್​ನಲ್ಲಿ ಜೋನಾಥನ್​ ಕ್ರಿಸ್ಟಿ ವಿರುದ್ಧ ಹಿನ್ನಡೆ ಅನುಭವಿಸಿದ ಲಕ್ಷ್ಯ ಎರಡನೇ ಸೆಟ್​ ಗೆಲ್ಲುವ ಮೂಲಕ ಸಮಬಲದ ಹೋರಾಟ ನೀಡಿದ್ದರು. ಮೂರನೇ ಸೆಟ್​ನಲ್ಲಿ ಹಿನ್ನಡೆ ಅನುಭವಿಸಿದ ಪರಿಣಾಮ ಜಿದ್ದಾಜಿದ್ದಿನ ಹೋರಾಟದಲ್ಲಿ ಸೋಲು ಅನುಭವಿಸಿದ್ದರು.

ಲಕ್ಷ್ಯ ಸೇನ್​ ಸೋಲಿನೊಂದಿಗೆ ಭಾರತದ ಪದಕದ ನಿರೀಕ್ಷೆ ಕಮರಿದೆ. ಪುರುಷರ ಡಬಲ್ಸ್​​ ವಿಭಾಗದಲ್ಲಿ ಭಾರತದ ಸಾತ್ವಿಕ್​ ಸಾತ್ವಿಕ್​ ಸಾಯಿರಾಜ್​ ರಂಕಿರೆಡ್ಡಿ ಹಾಗೂ ಚಿರಾಗ್​ ಶೆಟ್ಟಿ ಜೋಡಿ ಸೋಲು ಅನುಭವಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net