ನೆಲ್ಯಾಡಿಗೆ ಆಗಮಿಸಿದ ನಂದಿ ರಥಯಾತ್ರೆ

New Project (31)
Published on

ನೆಲ್ಯಾಡಿ: ಗೋ ಸೇವಾ ಗತಿವಿಧಿ ಕರ್ನಾಟಕ, ರಾಧಾ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ ಟ್ರಸ್ಟ್ ನೇತೃತ್ವದಲ್ಲಿ ಕರ್ನಾಟಕ ರಾಜ್ಯಾದ್ಯಂತ 80 ದಿನ ನಡೆಯಲಿರುವ ನಣದಿ ರಥಯಾತ್ರೆ ಮಾ.14ರಂದು ನೆಲ್ಯಾಡಿಗೆ ಆಗಮಿಸಿತು.

ಕೌಕ್ರಾಡಿ ಗ್ರಾಮದ ಹೊಸಮಜಲಿನಲ್ಲಿ ನಂದಿ ರಥಯಾತ್ರೆಯನ್ನು ಮಾಲಾರ್ಪಣೆ ಮಾಡಿ ಸ್ವಾಗತಿಲಾಯಿತು. ಕೌಕ್ರಾಡಿ ಗ್ರಾಪಂ ಅಧ್ಯಕ್ಷ ಉದಯ್ ಕುಮಾರ್ ಗೌಡ, ನೆಲ್ಯಾಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ ಅಧ್ಯಕ್ಷ ಬಾಲಕೃಷ್ಣ ಬಾಣಜಾಲ್, ಉಪಾಧ್ಯಕ್ಷ ರವಿಚಂದ್ರ ಹೊಸವೊಕ್ಲು, ಜಿಪಂ ಮಾಜಿ ಸದಸ್ಯ ದಿನೇಶ್ ಮೆದು, ನೆಲ್ಯಾಡಿ ಗ್ರಾಪಂ ಸದಸ್ಯ ಜಯಾನಂದ ಬಂಟ್ರಿಯಾಲ್, ಬೇಬಿ ಸದಾನಂದ, ಅಶ್ವತ್ಥ ಗೆಳೆಯರ ಬಳಗ ಸುಧೀರ್ ಕೃಷ್ಣ, ಸೋನಿತ್, ಮಿಥುನ್, ಹಿಂದು ಜಾಗರಣ ವೇದಿಕೆ ಮೋಹನ್ ಕಟ್ಟೆಮಜಲು, ಕೌಕ್ರಾಡಿ ಗ್ರಾಪಂ ಮಾಜಿ ಅಧ್ಯಕ್ಷ ಲೋಕೇಶ್ ಬಾಣಜಾಲ್, ಕುಶಾಲಪ್ಪ ಅನಿಲ, ನೆಲ್ಯಾಡಿ ಜೆಸಿಐ ನವ್ಯ ಪ್ರಸಾದ್, ಹಾಲು ಉತ್ಪಾದಕರ ಸಂಘ ಜಯರಾಮ ಬಾಣಜಾಲ್, ಅಯ್ಯಪ್ಪ ದೇವಸ್ಥಾನ ಪ್ರಧಾನ ಕಾರ್ಯದರ್ಶಿ ಸುಧೀರ್ ಕುಮಾರ್ ಮೊದಲಾದವರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net