ತಂತ್ರಜ್ಞಾನ ಬಳಕೆಯ ಪರಿಣತಿ ಅವಶ್ಯ : ಅಭಿಜಿತ್ ಶೆಟ್ಟಿ ಹೇಳಿಕೆ

New Project (3)
Published on

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ತಂತ್ರಜ್ಞಾನ ಮುಂದುವರಿದಂತೆ ಅವುಗಳ ಬಳಕೆಗೆ ಅಗತ್ಯವಿರುವ ಪರಿಣತಿ ಪಡೆದುಕೊಳ್ಳುವುದು ಅವಶ್ಯ. ಬದಲಾಗುತ್ತಿರುವ ತಂತ್ರಜ್ಞಾನದ ಅವಶ್ಯಕತೆ ಹಾಗೂ ಅವುಗಳ ಬಳಕೆ ಸಮಾಜದ ಮೇಲೆ ಪರಿಣಾಮ ಬೀರುತ್ತದೆ. ಮುಂದಿನ 2 ವರ್ಷಗಳಲ್ಲಿ ಕೃತಕ ಬುದ್ಧಿಮತ್ತೆಯ ಬೆಳವಣಿಗೆ ಇನ್ನಷ್ಟು ಪ್ರಗತಿ ಹೊಂದಲಿದೆ. ಟೆಕ್ಕಿಗಳು, ಇಂಜಿನಿಯರ್‌ಗಳು ತಂತ್ರಜ್ಞಾನ ಬಳಸುವ ವಿಧಾನದ ಮೇಲೆ ಒಟ್ಟು ಸಮಾಜದ ರೀತಿ ಅವಲಂಬಿತವಾಗಿರುತ್ತದೆ ಎಂದು ಜ್ಯುಗೊ ಸ್ಟುಡಿಯೋ ಪ್ರೈ.ಲಿ. ಉಪಾಧ್ಯಕ್ಷ ಅಭಿಜಿತ್ ಶೆಟ್ಟಿ ಹೇಳಿದರು.

ಆಳ್ವಾಸ್ ಸ್ವಾಯತ್ತ ಕಾಲೇಜಿನ ಗಣಕ ವಿಜ್ಞಾನ ವಿಭಾಗದ ವತಿಯಿಂದ ವಿದ್ಯಾಗಿರಿಯ ಡಾ.ವಿ.ಎಸ್.ಆಚಾರ್ಯ ಸಭಾಂಗಣದಲ್ಲಿ ಆಯೋಜಿಸಲಾಗಿರುವ ಎರಡು ದಿನದ ಟೆಕ್ ಉತ್ಸವ್ 2025 ಅಂತರ್ ಕಾಲೇಜು ತಂತ್ರಜ್ಞಾನ ಸಂಬಂಧಿ ಸ್ಪರ್ಧೆಗಳ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ್ ಆಳ್ವ, ಪ್ರಾಂಶುಪಾಲ ಡಾ.ಕುರಿಯನ್, ವಿಭಾಗದ ಮುಖ್ಯಸ್ಥೆ ವನಿತಾ ಪ್ರಭು, ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ವಿದ್ಯಾರ್ಥಿ ಸಂಯೋಜಕಿ ಸಮೀಕ್ಷಾ ಎಸ್., ಶಿಶಿರ್ ಎಸ್.ಉಪಸ್ಥಿತರಿದ್ದರು. ಶ್ರೀಶ್ ಕೋಟೆಗಾರ ನಿರೂಪಿಸಿದರು.

ಬಳಿಕ ಐಟಿ ಕ್ವಿಜ್, ಕಲ್ಚರಲ್ ಡಾನ್ಸ್, ಐಟಿ ಮ್ಯಾನೇಜರ್, ವೆಬ್ ಡಿಸೈನಿಂಗ್, ಕೋಡಿಂಗ್, ವಿಡಿಯೋಗ್ರಫಿ ಮುಂತಾದ ಸ್ಪರ್ಧೆ ಹಮ್ಮಿಕೊಳ್ಳಲಾಯಿತು. ಎರಡು ದಿನಗಳ ಟೆಕ್ ಉತ್ಸವ್‌ದಲ್ಲಿ ವಿವಿಧ ಭಾಗಗಳಿಂದ 400 ಅಧಿಕ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿದ್ಯಾರ್ಥಿಗಳು ಕಾಲೇಜಿನ ಫೆಸ್ಟ್‌ಗಳಿಗೆ ಯಾವ ರೀತಿಯ ಹೆಚ್ಚು ಮಹತ್ವ ನೀಡುತ್ತಾರೋ ಅದೇ ರೀತಿ ತಮ್ಮ ಜೀವನದ ಕೌಶಲ ವೃದ್ಧಿಗೆ ಹೆಚ್ಚಿನ ಮಹತ್ವ ನೀಡಬೇಕು. ಐಟಿ ಯುಗದಲ್ಲಿರುವ ನಾವುಗಳು ನೂತನ ತಂತ್ರಜ್ಞಾನಗಳ ಮಾಹಿತಿ ತಿಳಿಯುವುದು ಹಾಗೂ ಅವುಗಳನ್ನು ಬಳಸಿಕೊಂಡು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವುದು ಅಗತ್ಯ. ವಿವೇಕ್ ಆಳ್ವ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ https://www.vijayavani.net/national-conference-3 https://www.vijayavani.net/summer-camp-2

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net