

ಅಂಪಾರು: ರಾಜಕಾರಣಿಗಳಿಗಿಂತ ರಾಷ್ಟ್ರಕಾರಣಿಗಳಾಗಬೇಕು. ರಾಷ್ಟ್ರದ ಸಮಗ್ರ ಬೆಳವಣಿಗೆಗೆ ನಾಂದಿಯಾಗಬೇಕು ಎಂದು ಸಂಸದ ಡಾ.ಸಿ.ಎನ್.ಮಂಜುನಾಥ ಹೇಳಿದರು.
ಅಂಪಾರು ಗ್ರಾಮದ ಮೂಡುಬಗೆ ಸೇವಾ ಚೇತನ ಟ್ರಸ್ಟ್ ಆಶ್ರಯದಲ್ಲಿ ಮೂಡುಬಗೆ ನಮ್ಮೂರ ಸಂಭ್ರಮ ಮೈದಾನದಲ್ಲಿ ಇತ್ತೀಚೆಗೆ ನಮ್ಮೂರ ಸಂಭ್ರಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉದ್ಯಮಿ ಎಸ್.ಶಿವರಾಮ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು. ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ, ಗುರುರಾಜ್ ಗಂಟಿಹೊಳೆ, ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಪ್ರವೀಣಕುಮಾರ ಶೆಟ್ಟಿ, ಉದ್ಯಮಿ ಆರ್.ಉಪೇಂದ್ರ ಶೆಟ್ಟಿ, ಎಚ್.ಎಸ್.ರಾಘವೇಂದ್ರ ಶೆಟ್ಟಿ, ಬೇಳೂರು ರಾಘವೇಂದ್ರ ಶೆಟ್ಟಿ, ಅಶೋಕ ಶೆಟ್ಟಿ, ದಯಾನಂದ ಶೆಟ್ಟಿ, ವಿಜಯ ಶೆಟ್ಟಿ, ಕರುಣಾಕರ ಹೆಗ್ಡೆ, ಸುಗ್ಗಿ ಸುಧಾಕರ ಶೆಟ್ಟಿ, ಉಮೇಶ ಶೆಟ್ಟಿ, ಆದರ್ಶ ಶೆಟ್ಟಿ, ಅಮರನಾಥ ಶೆಟ್ಟಿ, ಜಿ.ಕೆ.ಶೆಟ್ಟಿ, ಉಮೇಶ್ ಕುಂದರ್, ಸುಧೀರ್ ಶೆಟ್ಟಿ, ಉದಯ ಶೆಟ್ಟಿ, ಸುರೇಶ ಶೆಟ್ಟಿ, ಕರುಣಾಕರ ಖಾಸಲೆ, ದಿನೇಶ ಶೆಟ್ಟಿ, ಅಂಪಾರು ಗ್ರಾಪಂ ಅಧ್ಯಕ್ಷ ಗೋಪಾಲಕೃಷ್ಣ ಕಿಣಿ, ಸೇವಾ ಚೇತನ ಟ್ರಸ್ಟ್ ಅಧ್ಯಕ್ಷ ಅರುಣ್‌ಕುಮಾರ ಶೆಟ್ಟಿ, ಉಪಾಧ್ಯಕ್ಷ ಸತ್ಯನಾರಾಯಣ ಉಪಸ್ಥಿತರಿದ್ದರು. ಕೋಶಾಧಿಕಾರಿ ಅಶೋಕ ಕೆ. ಸ್ವಾಗತಿಸಿದರು. ಸೇವಾ ಚೇತನ ಟ್ರಸ್ಟ್ ಸ್ಥಾಪಕಾಧ್ಯಕ್ಷ ಸಂತೋಷ್‌ಕುಮಾರ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಪತ್ರಕರ್ತ ರಾಜೇಶ ಕೆ.ಸಿ. ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ನವೀನ್‌ಕುಮಾರ ಶೆಟ್ಟಿ ವಂದಿಸಿದರು.
ಸೇವಾ ಚೇತನ ಟ್ರಸ್ಟ್ ಸಿರಿದೀಪ ಪ್ರಶಸ್ತಿ ಡಾ.ದೀಪಕ್‌ಕುಮಾರ್ ಶೆಟ್ಟಿ ಬಾರ್ಕೂರು, ನಮ್ಮೂರ ಕೀರ್ತಿ ಕಳಶ ಡಾ.ನಿತ್ಯಾನಂದ ಶೆಟ್ಟಿ ಅಂಪಾರು, ನಮ್ಮೂರ ಉದ್ಯಮ ರತ್ನ ಮಂಜುನಾಥ ಶೆಟ್ಟಿ ಕಾರ್ಗದ್ದೆ ಶಾನ್ಕಟ್ಟು, ಶಿಕ್ಷಣರತ್ನ ಪ್ರಶಸ್ತಿ ಡಾ.ಚೇತನ್ ಶೆಟ್ಟಿ ಕೋವಾಗಿ ಅವರಿಗೆ ನೀಡಿ ಗೌರವಿಸಲಾಯಿತು. ಸಾಮೂಹಿಕ ಸತ್ಯನಾರಾಯಣ ಪೂಜೆ, ಸೇವಾ ಚೇತನ ಟ್ರಸ್ಟ್ ವತಿಯಿಂದ ನಿರ್ಮಿಸಿದ 2ನೇ ಗೃಹ ಅಯೋಧ್ಯೆ ಹಸ್ತಾಂತರ, ನಾನತ್ರಯ ಸಂಭ್ರಮ, ಭಕ್ತಿ-ಭಾವ ಸಂಭ್ರಮ, ನೃತ್ಯ ಸಂಭ್ರಮ, ಸಾಂಸ್ಕೃತಿಕ ಸಂಭ್ರಮ ನಡೆಯಿತು.