

ಕೋಟ: ಸಾಧಕರನ್ನು ಗೌರವಿಸುವ ಮನಸ್ಥಿತಿ, ಗುಣಾತ್ಮಕ ಬೆಳವಣಿಗೆಗಳಿಂದ ಸಮಾಜದ ಏಳಿಗೆ ಸಾಧ್ಯ ಎಂದು ಸಾಲಿಗ್ರಾಮ ಶ್ರೀ ಗುರುನರಸಿಂಹ ದೇಗುಲದ ಅಧ್ಯಕ್ಷ ಡಾ.ಕೆ.ಎಸ್.ಕಾರಂತ ಹೇಳಿದರು.
ಯುವವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಎಂಟನೇ ವಾರ್ಷಿಕೋತ್ಸವ ಅನ್ವೇಷಣೆ-2025 ಉದ್ಘಾಟಿಸಿ ಮಾತನಾಡಿದರು. ಕರ್ನಾಟಕ ರಾಜ್ಯ ನೌರಕರ ಸಂಘಕ್ಕೆ ಆಯ್ಕೆಯಾದ ಪಿ.ವೈ ಕೃಷ್ಣಪ್ರಸಾದ ಹೇರ್ಳೆ, ಕೂಟಮಹಾಜಗತ್ತು ಕೇಂದ್ರ ಸಂಸ್ಥೆ ಅಧ್ಯಕ್ಷರಾಗಿ ಅಯ್ಕೆಯಾದ ಸತೀಶ್ ಹಂದೆ, ಪ್ರಧಾನ ಕಾರ್ಯದರ್ಶಿ ಸುರೇಶ ತುಂಗ, ವೈದ್ಯಕೀಯ ಕ್ಷೇತ್ರ ಸಾಧಕ ಡಾ.ಸ್ವಸ್ತಿಕ್ ಉಪಾಧ್ಯಾಯರನ್ನು ಗೌರವಿಸಲಾಯಿತು. ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆ ಅಧ್ಯಕ್ಷ ಸತೀಶ್ ಹಂದೆ, ಬೆಂಗಳೂರಿನ ಶೇಖರ್ ಆಸ್ಪತ್ರೆ ನಿರ್ದೇಶಕ ಡಾ.ಪಿ.ವಿಷ್ಣುಮೂರ್ತಿ ಮಯ್ಯ, ಅಘೋರೇಶ್ವರ ದೇಗುಲ ಕಾರ್ತಟ್ಟು ಅಧ್ಯಕ್ಷ ಚಂದ್ರಶೇಖರ್ ಕಾರಂತ, ಕೂಟ ಮಹಾಜಗತ್ತು ಕೇಂದ್ರ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಸುರೇಶ ತುಂಗ, ಕೂಟ ಮಹಾಜಗತ್ತು ಸಾಲಿಗ್ರಾಮ ಅಧ್ಯಕ್ಷ ಪಿ.ಸಿ.ಹೊಳ್ಳ, ಯುವ ವೇದಿಕೆ ಮಾರ್ಗದರ್ಶಕರಾದ ಮಂಜುನಾಥ ಉಪಾಧ್ಯಾ, ಎ.ಪಿ.ಅಡಿಗ ಅಸೋಸಿಯೇಟ್ಸ್ ಉಳ್ತೂರು ಮುಖ್ಯಸ್ಥ ಗಣೇಶ್ ಅಡಿಗ ಉಪಸ್ಥಿತರಿದ್ದರು. ಯುವವೇದಿಕೆ ಅಧ್ಯಕ್ಷ ಗಿರೀಶ್ ಮಯ್ಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶ್ರೀಕಾಂತ್ ಐತಾಳ್ ವರದಿ ವಾಚಿಸಿದರು. ವೆಂಕಟೇಶ ಮಯ್ಯ, ರವಿರಾಜ್ ಉಪಾಧ್ಯಾ, ಸಚಿನ್ ಹೇರ್ಳೆ, ಪ್ರಶಾಂತ್ ಹೇರ್ಳೆ ಸನ್ಮಾನ ಪತ್ರ ವಾಚಿಸಿದರು. ಶಶಿಧರ ಮಯ್ಯ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಪನ್ನವ ನಾವಡ ವಂದಿಸಿದರು.
ಹೃದ್ರೋಗ ತಜ್ಞೆ ಡಾ.ಪ್ರಭಾವತಿ, ಉಡುಪಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೆ.ತಾರಾನಾಥ ಹೊಳ್ಳ, ಸಮಾಜಸೇವಕ ಶ್ರೀಪತಿ ಅಧಿಕಾರಿ, ಶೌರ್ಯ ಪ್ರಶಸ್ತಿ ವಿಜೇತ ಧೀರಜ್ ಐತಾಳ್ ಅವರನ್ನು ಸನ್ಮಾನಿಸಲಾಯಿತು. ಸಾಧಕ ವಿದ್ಯಾರ್ಥಿಗಳಿಗೆ ಗೋವಿಂದ ನಕ್ಷತ್ರಿ ಪುತ್ರ ಶಿಕ್ಷಕ ಡಾ.ಬಾಲಕೃಷ್ಣ ನಕ್ಷತ್ರಿ ಅಂಬಾಗಿಲುಕೆರೆ, ದಿ.ಜಯಂತಿ ಮಧ್ಯಸ್ಥ ಸ್ಮರಣಾರ್ಥ ಸದಾಶಿವ ಮಧ್ಯಸ್ಥ ಅವರು ನೀಡಿದ ವಿದ್ಯಾನಿಧಿ ವಿತರಿಸಲಾಯಿತು.