

ಬೆಂಗಳೂರು: ನಮ್ಮ ಮೆಟ್ರೋ 2ನೇ ಹಂತದ ಯಲಚೇನಹಳ್ಳಿಯಿಂದ ಅಂಜನಾಪುರ ಮಾರ್ಗದಲ್ಲಿನ ಸಿಸ್ಟಂ ಮತ್ತು ರೈಲುಗಳ ಪರೀೆ ಮುಂದುವರಿಸಿರುವ ಕಾರಣ ಎರಡನೇ ಬಾರಿಗೆ ಸೆ. 27ರ ಮತ್ತು 28ರಂದು ಹಸಿರು ಮಾರ್ಗದಲ್ಲಿ ರೈಲು ಸೇವೆಯ ಅವಧಿ ಮೊಟಕುಗೊಳಿಸಲಾಗುತ್ತಿದೆ.
ಯಲಚೇನಹಳ್ಳಿಯಿಂದ ಅಂಜನಾಪುರವರೆಗಿನ ಮೆಟ್ರೋ ರೈಲು ಮಾರ್ಗದಲ್ಲಿ ನವೆಂಬರ್ ತಿಂಗಳಿನಿಂದ ವಾಣಿಜ್ಯ ಕಾರ್ಯಾಚರಣೆ ಆರಂಭವಾಗಲಿದೆ. ಆ ಹಿನ್ನೆಲೆಯಲ್ಲಿ ಈ ಮಾರ್ಗದಲ್ಲಿ ಈಗಾಗಲೆ ಪರೀಕ್ಷಾರ್ಥ ರೈಲು ಸಂಚಾರ ಆರಂಭಿಸಲಾಗಿದೆ. ಇದೀಗ ಮಾರ್ಗದಲ್ಲಿ ಅಳವಡಿಸಲಾದ ಸಿಗ್ನಲಿಂಗ್ ಸೇರಿ ಇನ್ನಿತರ ವ್ಯವಸ್ಥೆಗಳ ಪರೀೆ ನಡೆಸಲಾಗುತ್ತಿದೆ. ಸೆ. 19 ಮತ್ತು 20ರಂದು ಪರೀೆಯ ಕಾರಣದಿಂದ ಆರ್.ವಿ.ರಸ್ತೆಯಿಂದ ಯಲಚೇನಹಳ್ಳಿವರೆಗಿನ ಸೇವೆಯನ್ನು ಮೊಟಕುಗೊಳಿಸಲಾಗಿತ್ತು.
ಇದೀಗ ಮತ್ತೆ ಅದೇ ಮಾದರಿಯ ಪರೀೆಗಳು ನಡೆಯಬೇಕಿದ್ದು ಸೆ. 27 ಮತ್ತು 28ರಂದು ಬೆಳಗ್ಗೆ 7ರಿಂದ ರಾತ್ರಿ 9ರವರೆಗೆ ನಾಗಸಂದ್ರದಿಂದ ಆರ್.ವಿ.ರಸ್ತೆ ನಿಲ್ದಾಣದವರೆಗೆ ಮಾತ್ರ ರೈಲು ಸೇವೆ ಇರಲಿದೆ. ಹೀಗಾಗಿ ಆ ಎರಡು ದಿನ ಆರ್.ವಿ.ರಸ್ತೆಯಿಂದ ಯಲಚೇನಹಳ್ಳಿವರೆಗಿನ ಸೇವೆ ಸ್ಥಗಿತಗೊಳ್ಳಲಿದೆ.
ಇದನ್ನೂ ಓದಿ: ಪಾಕ್ ರಾಜಕೀಯದಲ್ಲಿ ಮತ್ತೆ ಸೇನೆ ಸಂಚಲನ
ಇನ್ನೊಂದು ಮೆಟ್ರೋ ಮಾರ್ಗವಾದ ಬೈಯಪನಹಳ್ಳಿಯಿಂದ ನಾಯಂಡಹಳ್ಳಿ ಮಾರ್ಗದಲ್ಲಿನ ಸೇವೆಯ ಅವಧಿಯಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಬೆಳಗ್ಗೆ 7 ಗಂಟೆಗೆ ಆರಂಭವಾಗುವ ರೈಲು ಸೇವೆ ರಾತ್ರಿ 9 ಗಂಟೆವರೆಗೆ ಇರಲಿದೆ. ಅಲ್ಲದೆ, ಸೆ. 29ರಂದು ಎರಡೂ ಮಾರ್ಗದಲ್ಲಿ ರೈಲು ಸೇವೆ ಹಿಂದಿನಂತೆ ಇರಲಿದೆ.