

ಬೆಂಗಳೂರು: ನಮ್ಮ ಮೆಟ್ರೋ ಸೇವೆ ಬಗ್ಗೆ ಪ್ರಯಾಣಿಕರ ಅನುಭವ ಸಂಗ್ರಹಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (ಬಿಎಂಆರ್ಸಿಎಲ್) ಮುಂದಾಗಿದೆ. ಈ ಸಂಬಂಧ ಏ.8 ರಿಂದ ಮೇ 6ರ ವರೆಗೆ ಸಮೀೆ ನಡೆಸಲಿದೆ.
ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ಸಮೀಕ್ಷೆ ನಡೆಸಲಾಗುತ್ತಿದ್ದು, ಇದರಿಂದ ಗುಣಮಟ್ಟದ ಸೇವೆ ನೀಡಲು ಹಾಗೂ ಲಂಡನ್ ಇಂಪೀರಿಯಲ್ ಕಾಲೇಜ್ ನಮ್ಮ ಮೆಟ್ರೋಗಾಗಿ ಕಾರ್ಯಕ್ಷಮತೆ ಸೂಚಕಗಳನ್ನು ರೂಪಿಸಲು ಬೇಕಿರುವ ಅಧ್ಯಯನ ನಡೆಸಲು ಸಹಕಾರಿಯಾಗಲಿದೆ ಎಂದು ಬಿಎಂಆರ್ಸಿಎಲ್ ತಿಳಿಸಿದೆ.
ಪ್ರಯಾಣಿಕರು ನಿಗಮದ ವೆಬ್ಸೈಟ್ನಲ್ಲಿ ಪ್ರತಿಕ್ರಿಯೆ ಪುಟಗಳಲ್ಲಿ ಭಾಗವಹಿಸಬಹುದು. ಜತೆಗೆ ನಿಲ್ದಾಣಗಳಲ್ಲಿ ಪ್ರದರ್ಶಿಸಲಾಗುವ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುವ ಮೂಲಕ ಅಧಿಕೃತ ಮೊಬೈಲ್ ಅಪ್ಲಿಕೇಶನ್ ಮೂಲಕ ಸಮೀಕ್ಷೆಯಲ್ಲಿ ಕೇಳಿರುವ ಪ್ರಶ್ನೆಗಳಿಗೆ ಉತ್ತರಿಸಬಹುದಾಗಿದೆ. ನಮ್ಮ ಮೆಟ್ರೋ ಲಭ್ಯತೆ, ನಿಲ್ದಾಣ ಪ್ರವೇಶಿಸುವಿಕೆ, ಸುಗಮ ಸಂಚಾರ, ಪ್ರಯಾಣಕ್ಕೆ ಮುನ್ನ ಮಾಹಿತಿ ಹಾಗೂ ಪ್ರಯಾಣದ ವೇಳೆ ನೀಡುವ ಮಾಹಿತಿಗೆ ಸಂಬಂಧಿಸಿ 11 ಪ್ರಶ್ನೆಗಳನ್ನು ಕೇಳಲಾಗಿದೆ.