ಬೆಂಗಳೂರಿನಲ್ಲಿ 225 'ನಮ್ಮ ಕ್ಲಿನಿಕ್' ಆರಂಭ; ವೈದ್ಯರ ಕೊರತೆಗೂ ಪರಿಹಾರ ಹುಡುಕಿದ ಬಿಬಿಎಂಪಿ

namma clinic
Published on

ಬೆಂಗಳೂರು: ಕಳೆದ ಜನವರಿ ರಾಜಧಾನಿ ಬೆಂಗಳೂರಿನಲ್ಲಿ 108 ವಾಡ್೯ಗಳಲ್ಲಿ 'ನಮ್ಮ ಕ್ಲಿನಿಕ್' ಆರಂಭವಾಗಿದ್ದವು. ಇದೀಗ ಅಗತ್ಯ ಸಿದ್ದತೆ ಮಾಡಿಕೊಳ್ಳುವ ಮೂಲಕ 225 ವಾಡ್೯ನಲ್ಲಿ 'ನಮ್ಮ ಕ್ಲಿನಿಕ್' ಆರಂಭವಾಗಿದೆ ಎಂದು ಬಿಬಿಎಂಪಿ ಆರೋಗ್ಯ ವಿಭಾಗದ ವಿಶೇಷ ಆಯುಕ್ತ ತ್ರಿಲೋಕಚಂದ್ರ ಅವರು ಮಾಹಿತಿ ನೀಡಿದ್ದಾರೆ.

ವೈದ್ಯರ ಕೊರತೆಗೂ ಬಿಬಿಎಂಪಿ ಪರಿಹಾರ ಹುಡುಕಿದ್ದು, ಆರೋಗ್ಯ ಇಲಾಖೆ ಹಾಗೂ ವೈದ್ಯಕೀಯ ಕಾಲೇಜುಗಳಲ್ಲಿ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳ ನೇಮಕ ಮಾಡಿಕೊಳ್ಳಲಾಗುತ್ತಿದೆ. ಹಾಗೆಯೇ 225 'ನಮ್ಮ ಕ್ಲಿನಿಕ್'ನಲ್ಲಿ 221 ನಸ್೯ಗಳು, 222 ವೈದ್ಯರು, 223 ಲ್ಯಾಬ್ ಟೆಕ್ನಿಷಿಯನ್, 232 ಮಂದಿ ಗ್ರೂಪ್ ಡಿ ಸಿಬ್ಬಂದಿ ನಿಯೋಜಿಸಲಾಗುತ್ತದೆ. 'ನಮ್ಮ‌ ಕ್ಲಿನಿಕ್' ಆರಂಭವಾದಗಿನಿಂದಲೂ 2.29 ಲಕ್ಷ ಮಂದಿ ಭೇಟಿ ನೀಡಿದ್ದು, 87,055 ಮಂದಿ ವಿವಿಧ ರೋಗ ಪರೀಕ್ಷೆಗಳಿಗೆ ಒಳಗಾಗಿದ್ದಾರೆ.

ಕ್ಲಿನಿಕ್‌ ಸಮಯ
'ನಮ್ಮ ಕ್ಲಿನಿಕ್'​​​​​​ಗಳು ಬೆಳಗ್ಗೆ 9 ರಿಂದ ಸಂಜೆ 4.30 ರವರೆಗೆ ಸೋಮವಾರದಿಂದ ಶನಿವಾರದವರೆಗೆ ಕಾರ್ಯನಿರ್ವಹಿಸಲಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net