

ಪೆರ್ಲ: ನಲ್ಕ ಸಮೀಪದ ಶುಳುವಾಲಮೂಲೆ ಶಿ್ರೀ ಸದನದಲ್ಲಿ ಶರನ್ನವರಾತ್ರಿ ಮಹೋತ್ಸವ ಅಕ್ಟೋಬರ್ 3ರಿಂದ 12ರವರೆಗೆ ಶಿವನಾರಾಯಣ ಭಟ್ಟರ ನೇತೃತ್ವದಲ್ಲಿ ನಡೆಯಲಿದೆ.
ಪ್ರತಿನಿತ್ಯ ಮಧ್ಯಾಹ್ನ 12 ಹಾಗೂ ರಾತ್ರಿ 8ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ. 7ರಂದು ಲಲಿತಾ ಸಹಸ್ರನಾಮ ಹವನ, ಶನಿ ಶಾಂತಿ ಹಾಗೂ ರಾತ್ರಿ ಆಶ್ಲೇಷ ಬಲಿ ನಡೆಯಲಿದೆ. ಅ12ರಂದು ಬೆಳಗ್ಗೆ 8ಕ್ಕೆ ಚಂಡಿಕಾ ಹವನ ಆರಂಭ, 11.30ಕ್ಕೆ ಪೂರ್ಣಾಹುತಿ, ಆಯುಧಪೂಜೆ, 12.30ಕ್ಕೆ ಮಹಾಪೂಜೆ, ರಾತ್ರಿ 9.30ರಿಂದ ಮಹಾಮಂಗಳಾರತಿ, ಅಷ್ಟಾವಧಾನ ಸೇವೆ, ಪ್ರಸಾದ ವಿತರಣೆ ನಡೆಯಲಿದೆ.
3ರಂದು ಮುಳ್ಳೇರಿಯದ ಶ್ರೀಗಣೇಶ ಯಕ್ಷಗಾನ ಕಲಾಕೇಂದ್ರದವರಿಂದ ಸಂಜೆ 6.30ಕ್ಕೆ ಯಕ್ಷಗಾನ ಬಯಲಾಟ, 4ರಂದು ಸಂಜೆ 6.30ರಿಂದ ಯಕ್ಷಗಾನ ಬಯಲಾಟ, 6ರಂದು ಬೆಳಗ್ಗೆ 10ರಿಂದ ಭಕ್ತಿ ಗಾನಾಮೃತ, ಸಂಜೆ 6.30ರಿಂದ ಕುಂಟಾಲುಮೂಲೆ ತಂಡದಿಂದ ಯಕ್ಷಗಾನ ಬಯಲಾಟ, 7ರಂದು ಸಂಜೆ 6.30ರಿಂದ ಬದಿಯಡ್ಕದ ರಂಗಸಿರಿ ತಂಡದಿಂದ ಯಕ್ಷಗಾನ ಬಯಲಾಟ, 9ರಂದು ಸಂಜೆ 6.30ರಿಂದ ಪೆರ್ಲ ಶ್ರೀಅಯ್ಯಪ್ಪಸ್ವಾಮಿ ಭಜನಾ ತಂಡದಿಂದ ಭಜನಾ ಸಂಕೀರ್ತನೆ, 10ರಂದು ಸಂಜೆ 6.30ರಿಂದ ಕುರಿಯ ವಿಠಲಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ ಉಜಿರೆ ತಂಡದಿಂದ ತಾಳಮದ್ದಳೆ ಕೂಟ ನಡೆಯಲಿದೆ. 12ರಂದು ರಾತ್ರಿ 7ರಿಂದ ಕಾರ್ತಿಕ ಶ್ಯಾಮ ಮುಂಡೋಳುಮೂಲೆ ಅವರಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ ಕಛೇರಿ ನಡೆಯಲಿದೆ.