

ಮಂಗಳೂರು: ದೇಶಕ್ಕೆ ಅಗ್ರಗಣ್ಯ ಕೊಡುಗೆ ನೀಡಿದ ಸದಾ ಸ್ಮರಣೀಯರಾದ ಮಹಾತ್ಮ ಗಾಂಧೀಜಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಆದರ್ಶ ಯುವ ಜನತೆಗೆ ಅನುಕರಣೀಯ ಎಂದು ಗೃಹರಕ್ಷಕದಳದ ಸಮಾದೇಷ್ಟ ಡಾ.ಮುರಲೀ ಮೋಹನ್ ಚೂಂತಾರು ಹೇಳಿದರು.
ಗಾಂಧಿ ಜಯಂತಿ ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿ ಜಯಂತಿಯ ಅಂಗವಾಗಿ ಮೇರಿಹಿಲ್‌ನ ಜಿಲ್ಲಾ ಗೃಹರಕ್ಷಕದಳ ಮತ್ತು ಪೌರರಕ್ಷಣಾ ಕಚೇರಿಯಲ್ಲಿ ಬುಧವಾರ ಲಯನ್ಸ್ ಮತ್ತು ಲಿಯೋ ಕ್ಲಬ್ ಮಂಗಳೂರು ಇವರು ಜಂಟಿಯಾಗಿ ಮಹನೀಯರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದು ಮಾತನಾಡಿದರು.
್ಲ ಜಿಲ್ಲಾ ಗೃಹರಕ್ಷಕದಳ ಕಛೇರಿಯ ಪ್ರಥಮ ದರ್ಜೆ ಸಹಾಯಕಿ ಶ್ಯಾಮಲಾ ಎ., ಕಚೇರಿ ಸಿಬ್ಬಂದಿ ಮಂಜುಳಾ ಮತ್ತು ಲಯನ್ಸ್ ಕ್ಲಬ್ ಉಪಾಧ್ಯಕ್ಷೆ ಹೇಮಾ ರಾವ್, ಲಿಯೋ ಅಧ್ಯಕ್ಷೆ ಆಲಿಶಾ ಸಿಕ್ವೇರಾ, ಲಯನ್ಸ್ ಕ್ಲಬ್‌ನ ಸದಸ್ಯರಾದ ರೊನಾಲ್ಡ್ ಮಸ್ಕರೇನ್ಹಸ್, ನ್ಯಾನ್ಸಿ ಮಸ್ಕರೇನ್ಹಸ್ ಮತ್ತು ಲಿಯೋಕ್ಲಬ್‌ನ ಕಾರ್ಯದರ್ಶಿ ರಿಯಾನ್ ರೊಡ್ರಿಗಸ್, ಲಿಯೋ ಕ್ಲಬ್‌ನ ಸದಸ್ಯರಾದ ಅಲೆಸಾಂಡ್ರಾ ಕ್ರಿಸ್ಟನ್ ಹೆರ್ರಿ ಹಾಗೂ ಮಂಗಳೂರು ಘಟಕದ ಗೃಹರಕ್ಷಕರಾದ ಸಂಜಯ್ ಶೆಣೈ, ಜ್ಞಾನೇಶ್, ದಿವಾಕರ, ಮರಿಯಾ ಡಿಸೋಜ, ಸುಲೋಚನಾ, ಜಯಂತಿ ಮತ್ತು ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಸುನಿಲ್, ಸಂತೋಷ್ ಹಾಗೂ ಮೂಡುಬಿದಿರೆ ಘಟಕದ ಚಂದ್ರಶೇಖರ್, ಮೂಲ್ಕಿ ಘಟಕದ ನಿಶಾ ಉಪಸ್ಥಿತರಿದ್ದರು.