‘ನಾಯಿ ಕಳೆದಿದೆ’ ನಾಟಕ ಪ್ರದರ್ಶನ

Drama
Published on

ಬೆಂಗಳೂರು: ನಮ್ದೆ ನಟನೆ ಸಾಂಸ್ಕೃತಿಕ ವೇದಿಕೆ ವತಿಯಿಂದ ಮೇ 5ರಂದು ಸಂಜೆ 7 ಗಂಟೆಗೆ ‘ನಾಯಿ ಕಳೆದಿದೆ’ ನಾಟಕ ಪ್ರದರ್ಶನ ಆಯೋಜಿಸಲಾಗಿದೆ.

ನಗರದ ಎನ್. ಆರ್. ಕಾಲೊನಿಯ ಡಾ. ಸಿ. ಅಶ್ವತ್ಥ್ ಕಲಾಭವನದಲ್ಲಿ ಪ್ರದರ್ಶನ ನಡೆಯಲಿದ್ದು, ರಾಜೇಂದ್ರ ಕಾರಂತ್‌ರ ರಚನೆ, ವಿನ್ಯಾಸ ಮತ್ತು ನಿರ್ದೇಶನದಲ್ಲಿ ನಾಟಕ ಮೂಡಿಬರಲಿದೆ ಎಂದು ಶ್ರೀ ಹರ್ಷ ಹುಣಸೂರು ತಿಳಿಸಿದ್ದಾರೆ.

ನಾಟಕದ ಬಗ್ಗೆ: ತಂದೆತಾಯಿಗಲು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಏನೆಲ್ಲ ತ್ಯಾಗ ಮಾಡುತ್ತಾರೆ, ಆದರೆ ಮಕ್ಕಳು ಕೆರಿಯರ್, ಹೆಚ್ಚಿನ ಸಂಬಳದ ನೆಪದೊಂದಿಗೆ ವಿದೇಶಗಳಿಗೆ ತೆರಳಿ ವೃದ್ಧ ಪೋಷಕರನ್ನು ಒಂಟಿಯಾಗಿಸುತ್ತಾರೆ. ಮಗ ವಿದೇಶಕ್ಕೆ ಹೋದ ಸಂಕಟದ ಜೊತೆ ಅವನ ನಾಯಿಯನ್ನು ಸಾಕಬೇಕಾಗುವ ಪೋಷಕರ ಸಂಕಷ್ಟದ ಕತೆಯೇ ‘ನಾಯಿ ಕಳೆದಿದೆ’ ನಾಟಕದ ಸಾರಾಂಶ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net